ವಿಜಯಪುರ: ಚಿನ್ನಕ್ಕಾಗಿ ತನ್ನ ಹೆಂಡತಿಯನ್ನೇ ಕೊಂದ ಪಾಪಿ ಗಂಡ!

0
Spread the love

ವಿಜಯಪುರ:- ಪಾಪಿ ಪತಿಯೊಬ್ಬ ಚಿನ್ನಕ್ಕಾಗಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ

Advertisement

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ತಾಂಡಾ ಎಲ್‌ಟಿ 2 ರಲ್ಲಿ ಘಟನೆ ಜರುಗಿದ್ದು, ರೇಷ್ಮಾ ವಿಕ್ರಮ ಚವ್ಹಾಣ ಹತ್ಯೆಯಾಗಿರುವ ಪತ್ನಿ ಎನ್ನಲಾಗಿದೆ. ಪತಿ ವಿಕ್ರಮ ಚವ್ಹಾಣ್ ನಿಂದ ಕೃತ್ಯ ನಡೆದಿದೆ.

ಮಾವ ಪ್ರಕಾಶ ಚವ್ಹಾಣ, ಅತ್ತೆ ಮೀನಾಕ್ಷಿ ಚವ್ಹಾಣ್ ಹತ್ಯೆಗೆ ಆರೋಪಿಗೆ ಸಾಥ್ ಕೊಟ್ಟಿದ್ದಾರೆ.

ಅಲ್ಲದೇ, ಐದು ಲಕ್ಷ ವರದಕ್ಷಿಣೆ ತರುವಂತೆ ಪತಿ ಕುಟುಂಬಸ್ಥರಿಂದ ಮಾನಸಿಕ, ದೈಹಿಕ ಕಿರುಕುಳ ಆರೋಪವೂ ಕೇಳಿ ಬಂದಿದೆ. ರೇಷ್ಮಾ ಕುತ್ತಿಗೆ ಭಾಗದಲ್ಲಿ ಹಲ್ಲೆಯ ಗುರುತುಗಳು ಪತ್ತೆ ಆಗಿದೆ ಎಂದು ಮೃತ ಮಹಿಳೆ ರೇಷ್ಮಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಘಟನೆ ಸಂಬಂಧ ಇಂಡಿ‌ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here