ಮಂಡ್ಯ:- ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರದ ಲೆಕ್ಕಾಧಿಕಾರಿಯೊಬ್ಬರು ನಾಪತ್ತೆ ಆಗಿದ್ದು, ಅವರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
Advertisement
ನಿರಂಜನ್ ನಾಪತ್ತೆಯಾದ ಗ್ರಾಮಲೆಕ್ಕಾಧಿಕಾರಿ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರದ ನಾಡಕಚೇರಿಯಲ್ಲಿ ಕೆಲಸ ಮಾಡುತಿದ್ದ ವಿಎ ನಿರಂಜನ್ ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ.
ಇಂದು ಮಧ್ಯಾಹ್ನ 1 ಗಂಟೆಯ ವರೆಗೂ ಕಚೇರಿಯಲ್ಲಿಯೇ ಇದ್ದ ವಿಎ ನಿರಂಜನ್ ಬಳಿಕ ತನ್ನ ಬೈಕ್‌ನಲ್ಲಿ ಹೊರಗೆ ಹೋಗಿದ್ದಾರೆ. ಕೊಳ್ಳೆಗಾಲದ ಕಾವೇರಿ ಪುರ ಸೇತುವೆ ಮೇಲೆ ಬೈಕ್ ಪತ್ತೆಯಾಗಿದ್ದು, ಬೈಕ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.