ವಿಜಯಸಾಕ್ಷಿ ಸುದ್ದಿ, ಅಬ್ಬಿಗೇರಿ: ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಣೆ ಮಾಡುವುದು ನಮ್ಮ ನಿಮ್ಮೆಲ್ಲರಿಗೆ ಸಿಕ್ಕ ಸದವಕಾಶವಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ನಮ್ಮ ನಿರಂತರ ಪರಿಶ್ರಮವನ್ನು ಹಾಕಿ ಗ್ರಾಮದ ಅಭಿವೃದ್ಧಿಯ ಕನಸು ಕಾಣಬೇಕು. ಅಂದಾಗ ಮಾತ್ರ ಗ್ರಾ.ಪಂ ನೌಕರರು ಜನ ಸಾಮಾನ್ಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಅಡಿಯಲ್ಲಿ ಬರುವ ಯೋಜನೆಗಳ ಮಹಾಪೂರವನ್ನು ಹರಿಸಬಹುದು ಎಂದು ಅಬ್ಬಿಗೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ ಅಭಿಪ್ರಾಯ ವ್ಯಕ್ತಪಡಿಸಿದರು.
ಅಬ್ಬಿಗೇರಿ ಗ್ರಾ.ಪಂನಲ್ಲಿ ಅಂಧತ್ವವುಳ್ಳ ಅಧಿಕಾರಿ/ಸಿಬ್ಬಂದಿಗಳಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತನ್ನಿಮಿತ್ತ ಅಬ್ಬಿಗೇರಿ ಗ್ರಾಮಕ್ಕೆ ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆಯ ಪ್ರಾದೇಶಿಕ ಕೇಂದ್ರ ರಾಯಪೂರ- ಧಾರವಾಡ ಹಮ್ಮಿಕೊಂಡಿದ್ದ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಲಲಿತಾ ರಾಠೋಡ, ಉಪಾಧ್ಯಕ್ಷರಾದ ಅಕ್ಕಮ್ಮ ಡೊಳ್ಳಿನ ಸದಸ್ಯರಾದ ಬಸಪ್ಪ ಕಮ್ಮಾರ, ಶಂಕ್ರಪ್ಪ ಇಟಗಿ, ದೇವಪ್ಪ ಜಂತ್ಲಿ, ಮಂಜುಳಾ ತಳವಾರ, ರೇಖಾ ಅವರೆಡ್ಡಿ, ವಿಜಯಲಕ್ಷ್ಮಿ ಬಸವರೆಡ್ಡೇರ, ರೇಣಮ್ಮ ಹಳ್ಳಿ, ರೇಖಾ ವೀರಾಪೂರ, ಮಾಳಶೆಟ್ಟಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದ ಗ್ರಂಥಪಾಲಕರಾದ ವಿರೇಶ ಬಳಿಗೇರ ಸೇರಿದಂತೆ ತರಬೇತಿದಾರರು ಹಾಜರಿದ್ದರು.