ಆ್ಯಪಲ್ ತಿನ್ನುತ್ತ, ನಗುನಗುತ್ತಲೇ ಜೈಲಿನಿಂದ ಹೊರಬಂದ ವಿನಯ್, ರಜತ್

0
Spread the love

ಮಚ್ಚು ಹಿಡಿದು ರಸ್ತೆಯಲ್ಲಿ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಹಾಗೂ ರಜತ್‌ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.

Advertisement

ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಇಬ್ಬರಿಗೂ 24ನೇ ಎಸಿಎಂಎಂ ಕೋರ್ಟ್ ನಿನ್ನೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಸಮಯಕ್ಕೆ ಸರಿಯಾಗಿ ಜಾಮೀನು ಆದೇಶ ಪ್ರತಿ ತಲುಪದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಜೈಲಿನಲ್ಲೇ ಕಳೆದಿದ್ದ ಇಬ್ಬರು ಇಂದು ಬೆಳಗ್ಗೆ ಬಿಡುಗಡೆಗೊಂಡಿದ್ದಾರೆ.

ಜೈಲಿನಿಂದ ಹೊರ ಬಂದ ವೇಳೆ ಇಬ್ಬರು ಖುಷಿಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು ಬಂದಿದ್ದಾರೆ. ಈ ವೇಳೆ ಕೈಯಲ್ಲಿ ಸೇಬು ಹಣ್ಣು ತಿನ್ನುತ್ತ ನಗು ನಗುತ್ತ ಜೈಲಿನಿಂದ ಹೊರ ಬಂದಿದ್ದಾರೆ. ಈ ವೇಳೆ ಕೆಲವು ವಿಸಿಟರ್​ ಇಬ್ಬರ ಬಳಿ ಸೆಲ್ಫಿ ಕೇಳಿದ್ದು ಸೆಲ್ಫಿಗೂ ಪೋಸ್ ನೀಡಿದ್ದಾರೆ.

ರೀಲ್ಸ್​ ಮಾಡುವ ಬರದಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್​ ಮಾಡಿದ್ದರು. ಹೀಗಾಗಿ ಈ ಇಬ್ಬರ ಮೇಲೆ ​ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದ್ರೆ, ವಿನಯ್​ ಗೌಡ ಹಾಗೂ ರಜತ್​ ಕಿಶನ್ ಫೈಬರ್​ ಮಚ್ಚು ನೀಡಿ ಯಾಮಾರಿಸಿದ್ದರು. ಇದೀಗ ಇಬ್ಬರು ಹೊರ ಬಂದಿದ್ದು ಇನ್ನೂ ರಿಯಲ್‌ ಮಚ್ಚಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here