ರಸ್ತೆಯಲ್ಲಿ ಮಚ್ಚು ಬೀಸಿ ರೀಲ್ಸ್ ಮಾಡಿ ಜೈಲು ಸೇರಿದ್ದ ವಿನಯ್ ಹಾಗೂ ರಜತ್ ಜಾಮೀನಿನ ಮೂಲಕ ಹೊರ ಬಂದಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ಗೆ ನಿನ್ನೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಕೆಲವೊಂದು ಪ್ರಕ್ರಿಯೆಗಳು ಭಾಕಿ ಇದ್ದ ಕಾರಣ ಇಂದು ಬಿಡುಗಡೆಯಾಗಿ ಹೊರ ಬಂದಿದ್ದಾರೆ. ಇದೀಗ ಜೈಲಿನಿಂದ ಹೊರ ಬರುತ್ತಿದ್ದಂತೆ ವಿನಯ್ ಏಕಾಏಕಿ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಪ್ರೀತಿಯ ವಿನಯ್ ಗೌಡ. ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳಬೇಕಾಗಿತ್ತು. ದಯವಿಟ್ಟು ಕ್ಷಮಿಸಿಬಿಡಿ. ಕಳೆದ ನಾಲ್ಕು ದಿನಗಳಿಂದ ಒಂದು ಮಚ್ಚಿನ ಕತೆ ನಡೀತಾ ಇದೆ. ಅದಕ್ಕೋಸ್ಕರ ನಾನು ಕ್ಷಮೆ ಕೇಳಬೇಕಾಗಿತ್ತು. ಸ್ಪೆಷಲ್ ನನ್ ಫ್ಯಾನ್ಸ್ ಗೆ ನನ್ನ ಫ್ಯಾಮಿಲಿಗೆ ಪ್ರತಿಯೊಬ್ಬರಿಗೂ ಸಾರಿ ಕೇಳ ಬೇಕು ಅಂತ ವಿಡಿಯೋ ಮಾಡ್ತಿರೋದು.
ಮೊದಲನೆಯದಾಗಿ ನನ್ನಿಂದ ತೊಂದರೆ ಆಗಿರೋದು ನನ್ನ ಫ್ಯಾಮಿಲಿಗೆ, ನನ್ನ ಹೆಂಡತಿಗೆ ನನ್ನ ಮಗನಿಗೆ. ದಯವಿಟ್ಟು ಕ್ಷಮಿಸಿಬಿಡಿ. ಅದಾದ ಮೇಲೆ ನನ್ನ ಸ್ನೇಹಿತರಿಗೆ ತುಂಬಾ ತೊಂದರೆಯಾಗಿದೆ. ನನ್ನ ಸ್ನೇಹತನಿಗೆ ತೊಂದರೆ ಆಗಿದೆ. ಚೇತನ್ ಶಂಕರ್. ಸೀನ. ಸಾಕಷ್ಟು ಜನರು ದಿನ ರಾತ್ರಿ ಅಂತ ನೋಡಿದ್ದೀರಾ? ಜೊತೆ ನಿಂತುಕೊಂಡು. ಪೊಲೀಸ್ ಸ್ಟೇಷನ್ ಹತ್ತಿರ ನಿಂತು ಕೊಂಡು. ಸೆಂಟ್ರಲ್ ಜೈಲ್‌ನಲ್ಲಿ ನಿಂತುಕೊಂಡು ನಮಗೋಸ್ಕರ ಕಾಯ್ದುಕೊಂಡಿದ್ದು ತುಂಬಾ ತುಂಬಾ ತುಂಬಾ ಹೆಲ್ಪ್ ಮಾಡಿದ್ದಾರೆ.
ನಮ್ಮ ಅಕ್ಕ ಅಪರ್ಣ ಮತ್ತೆ ನಮ್ಮ ಭಾವ ತುಂಬಾ ಓಡಾಡಿದ್ದಾರೆ. ಈ ಒಂದು ಪ್ರಕರಣಕ್ಕೆ ತುಂಬಾ ಹೆಲ್ಪ್ ಮಾಡಿದ್ದಾರೆ. ನನ್ನ ಮಾಧ್ಯಮ ಮಿತ್ರರಿಗೆ ಕ್ಷಮೆ ಕೇಳಬೇಕಾಗಿದೆ. ದಯವಿಟ್ಟು ಕ್ಷಮಿಸಿ ನನ್ನಿಂದ ತಪ್ಪಾಗಿದೆ. ಮಚ್ಚು ಇಟ್ಕೊಂಡು ಮಾಡಿರೋ ವಿಡಿಯೋ ನಿಂದ ಇಷ್ಟೆಲ್ಲ ತೊಂದರೆ ಆಗಿತ್ತು. ದಯವಿಟ್ಟು ಕ್ಷಮಿಸಿ ನಿಮಗೆಲ್ಲರಿಗೂ ತೊಂದರೆ ಕೊಟ್ಟೆ.
ನನ್ನ ತಪ್ಪಿದೆ ಇಲ್ಲ ಅಂತ ಹೇಳ್ತಿಲ್ಲ. ನಾನು ಎಚ್ಚರಿಕೆ ಇಂದ ಇರಬೇಕಿತ್ತು. ಇತರ ಒಂದು ಇನ್ಫರ್ಮೇಶನ್ ನನ್ನ ಫ್ಯಾನ್ಸ್ ಗೆ ನಾನು ಕೊಡಬಾರದಾಗಿತ್ತು. ದಯವಿಟ್ಟು ಕ್ಷಮಿಸಿಬಿಡಿ. ಸಾಕಷ್ಟು ಸಪೋರ್ಟ್ ಮಾಡಿದ್ದೀರಾ? ನನ್ನ ಬಗ್ಗೆ ಮಾಡಿರುವಂತಹ ಮಾತುಗಳೆಲ್ಲಾ ನೋಡಿದೆ. ನನಗೆ ಬೇಜಾರು ಆಗಿಲ್ಲ. ನೀವು ಮಾಡಿರೋದು ನಿಮ್ಮ ಕೆಲಸ. ನನ್ನ ಕಡೆಯಿಂದ ಕ್ಷಮೆ ಇರಲಿ ಅಂತ ನಾನು ಕೇಳ್ತಾ ಇದ್ದೀನಿ.
ಪೊಲೀಸ್ ಇಲಾಖೆಯವರು. ಅವರು ತನಿಖೆಯ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಒಂದು ಸೆಲೆಬ್ರಿಟಿ ಅಥವಾ ಕಾಮನ್ ವತ್ಯಾಸ ಇಲ್ಲಿದೆ ಏನಿದೆಯೋ ಅದ ಅದರ ಪ್ರಕಾರವಾಗಿ ಅವರು ಇನ್ವೆಸ್ಟಿಗೇಷನ್ ಮಾಡಿದ್ದಾರೆ. ಒಬ್ಬ ಕಾಮನ್ ಮ್ಯಾನ್ ಗೆ ಹೇಗೆ ಟ್ರೀಟ್ ಮಾಡಿದ್ದಾರೋ ಹಾಗೇ ಮಾಡಿದ್ದಾರೆ. ದಯವಿಟ್ಟು ಅವರ ಮೇಲೆ ಯಾವುದೇ ಅಲಿಗೇಷನ್ ಮಾಡಬೇಡಿ ಎಂದು ವಿನಯ್ ವಿಡಿಯೋದಲ್ಲಿ ಕೇಳಿ ಕೊಂಡಿದ್ದಾರೆ.