ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ನಟ ವಿಜಯ್ ರಾಜ್ ಕುಮಾರ್ ಜೊತೆಯಾಗಿ ಸುತ್ತಾಡಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಫೋಟೋ ನೋಡಿ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಇದೀಗ ಅದಕ್ಕೆಲ್ಲಾ ನಟಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಫೋಟೋ ವೈರಲ್ ಆಗುತ್ತಿದ್ದಂತೆ ರಮ್ಯಾ ಹಾಗೂ ವಿನಯ್ ರಾಜ್ಕುಮಾರ್ ನಡುವೆ ಅಂತೆ ಕಂತೆ ಇದೆ ಎಂದು ಮಾತನಾಡಿಕೊಳ್ಳಲು ಶುರುಮಾಡಿದ್ದರು. ಜೊತೆಗೆ ಅಭಿಮಾನಿಯೋರ್ವ R u Dating Vinay ಎಂದು ಪ್ರಶ್ನೆ ಮಾಡಿದ್ದು ಅದಕ್ಕೀಗ ನಟಿ ಸ್ಪಷ್ಟನೆ ನೀಡಿದ್ದಾರೆ,
ವಿನಯ್ ರಾಜ್ಕುಮಾರ್ ನನಗೆ ತಮ್ಮನಿದ್ದಂತೆ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಯೊಬ್ಬ R u Dating Vinay ಎಂದು ಕಾಮೆಂಟ್ ಮಾಡಿದ್ದಕ್ಕೆ ರಮ್ಯಾ Nooooo ಅಂತ ಸ್ಮೈಲಿ ಎಮೋಜಿ ಹಾಕಿ ರಿಪ್ಲೇ ಮಾಡಿದ್ದಾರೆ.



