ಲಾಂಗ್ ಹಿಡಿದು ರಸ್ತೆಯಲ್ಲಿ ಓಡಾಡುತ್ತ ರೀಲ್ಸ್ ಮಾಡಿದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ಗೆ ಸಮಸ್ಯೆ ಎದುರಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಗೌಡರನ್ನು ಬಸವೇಶ್ವರ ನಗರ ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದು, ಇದರಿಂದ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಚಿತ್ರೀಕರಣಕ್ಕೆ ಮತ್ತೆ ತೊಂದರೆ ಆಗಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.
ಡೆವಿಲ್ ಚಿತ್ರತಂಡಕ್ಕೆ ಮತ್ತೆ ಮತ್ತೆ ಸಂಕಷ್ಟ ಎದುರಾಗುತ್ತಿದೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿದ ಕಾರಣಕ್ಕೆ ಹಲವು ತಿಂಗಳ ಕಾಲ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಶೂಟಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ವಿನಯ್ ರೀಲ್ಸ್ ಮಾಡಿ ಜೈಲು ಸೇರುವಂತಾಗಿದೆ. ಡೆವಿಲ್ ಸಿನಿಮಾದಲ್ಲಿ ವಿನಯ್ ಮೇನ್ ವಿಲನ್ ಆಗಿ ನಟಿಸುತ್ತಿದ್ದಾರೆ, ಹೀಗಾಗಿ ಮತ್ತೆ ಡೆವಿಲ್ ಸಿನಿಮಾದ ಶೂಟಿಂಗ್ ಗೆ ಸಮಸ್ಯೆ ಆಗಲಿದೆಯ ಎಂಬ ಅನುಮಾನ ಶುರುವಾಗಿದೆ.
ಈಗಾಗಲೇ ಮೈಸೂರಿನಲ್ಲಿ ನಡೆದ ಡೆವಿಲ್ ಚಿತ್ರೀಕರಣದಲ್ಲಿ ವಿನಯ್ ಭಾಗಿಯಾಗಿ ಒಂದು ಹಂತದ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ‘ಡೆವಿಲ್’ ಚಿತ್ರೀಕರಣ ಸದ್ಯ ರಾಜಸ್ಥಾನದಲ್ಲಿ ನಡೆಯುತ್ತಿದ್ದು, ಮಾ.25ರಿಂದ ಏ.2ರವರೆಗೂ ಶೂಟಿಂಗ್ ಇರಲಿದೆ. ಅವಶ್ಯಕತೆ ಇದ್ದರೆ ಕರೆಸಿಕೊಳ್ಳುತ್ತೇವೆ ಎಂದು ನಿರ್ದೇಶಕರು ವಿನಯ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದಲ್ಲದೇ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮುಂದಿನ ಶೆಡ್ಯೂಲ್‌ಗೆ ಡೆವಿಲ್ ಶೂಟಿಂಗ್ ಪ್ಲ್ಯಾನ್ ಮಾಡಲಾಗಿದೆ. ಹಾಗಾಗಿ ವಿನಯ್ ಬಂಧನ ಸಹಜವಾಗಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.