ಕಾರವಾರ:- ವಿನಾಯಕ ನಾಯ್ಕ್ ಹತ್ಯೆ ಕೇಸ್ ಸಂಬಂಧ ಬಂಧಿತರು ಬಾಯ್ಬಿಡುತ್ತಿದ್ದಂತೆ ಇತ್ತ ಬ್ಯುಸಿನೆಸ್ ಮ್ಯಾನ್ ಸೂಸೈಡ್ ಮಾಡಿಕೊಂಡಿದ್ದಾರೆ.
ಮೃತ ಉದ್ಯಮಿಯನ್ನು ಗುರುಪ್ರಸಾದ ರಾಣೆ ಎಂದು ಗುರುತಿಸಲಾಗಿದೆ. ಗೋವಾದ ಮಾಂಡೋವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ತಾಲೂಕಿನ ಹಣಕೋಣದಲ್ಲಿ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 5:30ಕ್ಕೆ ಉದ್ಯಮಿ ವಿನಾಯಕ ನಾಯ್ಕ್ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಬರ್ಬರ್ ಹತ್ಯೆ ಮಾಡಿ ಹಂತಕರು ಪರಾರಿ ಆಗಿದ್ದರು. ಬಳಿಕ ಹಂತಕರಿಗಾಗಿ ಉತ್ತರ ಕನ್ನಡ ಪೊಲೀಸರು ಬಲೆ ಬಿಸಿದ್ದರು. ಅದರಂತೆಯೇ ನಿನ್ನೆ ಮೂವರನ್ನು ಬಂಧಿಸಲಾಗಿತ್ತು.
ಬಂಧಿತರು ಕೊಲೆಗೆ ಗುರುಪ್ರಸಾದ ರಾಣೆ ಸುಪಾರಿ ಕೊಟ್ಟಿದ್ದಾರೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಅತ್ತ ಉದ್ಯಮಿ ಗುರುಪ್ರಸಾದ ಹೆಸರು ಹೇಳುತ್ತಿದ್ದಂತೆ ಗೋವಾ, ಮುಂಬೈ, ದೆಹಲಿಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಕೆಲವೇ ನಿಮಿಷಗಳಲ್ಲಿ ಗೋವಾದ ಮಾಂಡೋವಿ ನದಿಯಲ್ಲಿ ಮೃತ ದೇಹ ಒಂದು ಪತ್ತೆಯಾಗಿದೆ. ಪತ್ತೆಯಾದ ಮೃತದೇಹ ಗುರುಪ್ರಸಾದ ರಾಣೆದೆ ಎಂಬುವುದು ದೃಢವಾಗಿದೆ.
ಗುರುಪ್ರಸಾದ ರಾಣೆ ಉದ್ಯಮಿ ವಿನಾಯಕ ನಾಯ್ಕ್ ಅವರನ್ನು ವೈಯಕ್ತಿಕ ಕಾರಣಕ್ಕೆ ಹತ್ಯೆ ಮಾಡಿಸಿದ್ದಾರೆ ಎಂಬುವುದು ತಿಳಿದುಬಂದಿದೆ.