ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಮುಂದೂಡಿಕೆ: ‘ಬೆಳ್ಳಿ’ ಗಾಗಿ ಕ್ರೀಡಾಭಿಮಾನಿಗಳು ಮತ್ತಷ್ಟು ಕಾತುರ!

0
Spread the love

50 ಕೆಜಿ ಮಹಿಳಾ ಕುಸ್ತಿ ಫೈನಲ್ ಪಂದ್ಯದಲ್ಲಿ ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಮುಂದೂಡಿಕೆ ಆಗಿದ್ದು, ‘ಬೆಳ್ಳಿ’ ಪದಕ್ಕಾಗಿ ಕ್ರೀಡಾಭಿಮಾನಿಗಳು ಮತ್ತಷ್ಟು ಕಾತುರರಾಗಿದ್ದಾರೆ.

Advertisement

ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್​ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಘಾತಕಾರಿ ಎದುರಿಸಿದ ಅನರ್ಹತೆಯ ಕುರಿತ ವ್ಯಾಜ್ಯದ ತೀರ್ಪನ್ನು ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ ಮತ್ತಷ್ಟು ಮುಂದೂಡಿಕೆ ಮಾಡಿದೆ.

ಕ್ರೀಡಾ ನ್ಯಾಯಾಲಯವು ಈ ವಿಷಯದ ಬಗ್ಗೆ ವಿಸ್ತರಣೆಯನ್ನು ಕೇಳಿರುವುದು ಇದು ಮೂರನೇ ಬಾರಿ. ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್​​ನ ಫೈನಲ್​ಗೆ ಮೊದಲು ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿದ್ದರು.

ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಭಾರತೀಯ ಕ್ರೀಡಾಭಿಮಾನಿಗಳು ತೀರ್ಪಿಗಾಗಿ ಮತ್ತಷ್ಟು ಕಾಯುವಂತಾಗಿದೆ.

ಫೋಗಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ನಡುವಿನ ಪ್ರಕರಣದ ತೀರ್ಪನ್ನು ಮತ್ತಷ್ಟು ವಿಳಂಬಗೊಳಿಸುವುದಾಗಿ ನ್ಯಾಯಾಲಯ ಮಂಗಳವಾರ ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಕಟಿಸಿದೆ.


Spread the love

LEAVE A REPLY

Please enter your comment!
Please enter your name here