ನಟ ವಿನೋದ್ ಪ್ರಭಾಕರ್ ಅವರು ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದಾರೆ.
‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಸಿನಿಮಾ ತಂಡದೊಂದಿಗೆ ವಿನೋದ್ ಪ್ರಭಾಕರ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಮಂತ್ರಾಲಯ ಹಾಗೂ ರಾಯಚೂರಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.
ರಾಯಚೂರಿನ ಗಾಂಧಿ ವೃತ್ತದಲ್ಲಿನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ನನಗೆ ನಮ್ಮ ತಂದೆಯವರಿಗೆ ಉತ್ತರ ಕರ್ನಾಟಕದಿಂದ ಒಳ್ಳೆಯ ಅಭಿಮಾನ ಬಳಗ ಇದೆ. ಈ ಕಡೆ ಜನ ನಮಗೆ ತುಂಬಾ ಬೆಂಬಲ ಕೊಡುತ್ತಾರೆ. ಬೆಳಗ್ಗೆ ಮಂತ್ರಾಲಯ ರಾಯರ ಮಠಕ್ಕೆ ಹೋಗಿ ಆಶಿರ್ವಾದ ಪಡೆದಿದ್ದೇವೆ. ಜೂನ್ 6 ಕ್ಕೆ ಮಾದೇವ ಸಿನಿಮಾ ತೆರೆಗೆ ಬರುತ್ತಿದೆ. ಇಡೀ ಚಿತ್ರ ತಂಡ ಪ್ರಚಾರ ನಡೆಸಿದ್ದೇವೆ. ಎಲ್ಲರೂ ಹರಸಿ ಹಾರೈಸಬೇಕು ಎಂದರು.
ತಮ್ಮ ಮುಂದಿನ ಸಿನಿಮಾ ಯಶಸ್ಸಿಗಾಗಿ ನಟ ವಿನೋದ್ ಪ್ರಭಾಕರ್ ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದಾರೆ.