ಬೆಂಗಳೂರು:- ಇತ್ತೀಚೆಗೆ ಚಿತ್ರದುರ್ಗದ ಮೃತ ವ್ಯಕ್ತಿ ರೇಣುಕಾಸ್ವಾಮಿ ಮನೆಗೆ ಹಿರಿಯ ನಟ ವಿನೋದ್ ರಾಜ್ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಂದಿದ್ದಾರೆ.
ಆದರೆ ಇದೀಗ ಈ ನಟನ ಬಗ್ಗೆ ಆರೋಪವೊಂದು ಕೇಳಿ ಬಂದಿದ್ದು, ದರ್ಶನ್ ಪರ ರಾಜಿ ಸಂಧಾನಕ್ಕೆ ಹೋಗಿದ್ರಾ ಎಂಬ ಮಾತುಗಳು ಕೇಳಿ ಬಂದಿವೆ.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ವಿನೋದ್ ರಾಜ್, ನಾನು ನಾಲ್ಕೈದು ದಿನಗಳ ಹಿಂದೆ ದರ್ಶನ್ ಅವರನ್ನ ಜೈಲಿನಲ್ಲಿ ಭೇಟಿಯಾಗಿದ್ದೆ. ದರ್ಶನ್ ಭೇಟಿ ಮಾಡಿದ ನಂತರ ನಾನು ರೇಣುಕಾ ಸ್ವಾಮಿ ಮನೆಗೆ ಭೇಟಿ ಮಾಡಿದ್ದೆ ಎಂದಿದ್ದಾರೆ.
ದರ್ಶನ್ ಕಲಾವಿದರು ಹಾಗೂ ನನಗೆ ಪರಿಚಯ ಇದ್ದಾರೆ. ಹೀಗಾಗಿ ನಾನು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದೆ. ರೇಣುಕಾ ಸ್ವಾಮಿ ಮಡದಿ ಗರ್ಭಿಣಿ ಇದ್ದಾರೆ ಹುಟ್ಟೋ ಮಗುವಿಗೆ ಏನಾದರೂ ಒಳ್ಳೆಯದು ಮಾಡಬೇಕು ಅನ್ನೋ ಉದ್ದೇಶದಿಂದ ಚಿತ್ರದುರ್ಗಕ್ಕೆ ಹೋಗಿದ್ದೆ ಎಂದಿದ್ದಾರೆ.
ನಾನು ಯಾವುದೇ ರಾಜಿ ಸಂಧಾನಕ್ಕಾಗಿ ನಾನು ಹೋಗಿಲ್ಲ. ಅಂತಹ ಕೆಲಸವನ್ನು ನಾನು ಮಾಡೊದಿಲ್ಲ ಎಂದು ವಿನೋದ್ ರಾಜ್ ಹೇಳಿದ್ದಾರೆ.