ಸಾಕಷ್ಟು ವಿವಾದಗಳ ಹುಟ್ಟು ಹಾಕಿರುವ ವಿಷ್ಣುವರ್ಧನ್ ಸ್ಮಾರಕ ದ ಪುತ್ಥಳಿ ನಿರ್ಮಾಣಕ್ಕೆ ಇದೀಗ ಚಾಲನೆ ದೊರೆತಿದೆ. ಕೆಂಗೇರಿ ಬಳಿ ಅರ್ಧ ಎಕರೆ ಜಮೀನು ಖರೀದಿಸಿರುವ ನಟ ಸುದೀಪ್, ಆ ಜಮೀನನ್ನು ವಿಷ್ಣು ಸ್ಮಾರಕ ಮಾಡಲು ಹೊರಟಿದ್ದಾರೆ. ಅದಕ್ಕೆ ವೀರಕಪುತ್ರ ಶ್ರೀನಿವಾಸ್ ಮುಂದಾಳತ್ವ ವಹಿಸಿಕೊಂಡಿದ್ದಾರೆ.
ಇದೀಗ ಪುತ್ಥಳಿ ನಿರ್ಮಾಣಕ್ಕೆ ಅಡ್ವಾನ್ಸ್ ಕೊಡುವ ಮೂಲಕ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ದಾದಾ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು.
ಇದೀಗ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಸೆಪ್ಟೆಂಬರ್ 18ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಮಹತ್ವದ ಕೆಲಸಕ್ಕೆ ದಾದಾರ ಫ್ಯಾನ್ಸ್ ಮುಂದಾಗುತ್ತಿದ್ದಾರೆ.