ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿಶ್ವಕರ್ಮ ಸಮಾಜದವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದರಲ್ಲೂ ಅಮರಶಿಲ್ಪಿ ಜಕಣಾಚಾರಿ ಕೈಚಳಕದಿಂದ ನಿರ್ಮಿಸಿದ ದೇವಾಲಯಗಳು ಅವರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿವೆ ಎಂದು ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.
ಇಲ್ಲಿನ ಪ.ಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅನಾದಿಕಾಲದಿಂದಲೂ ದೇವಾಲಯಗಳ ನಿರ್ಮಾಣ ಕಾಲದಲ್ಲಿ ಶಿಲ್ಪಕಲೆಯ ಕೊಡುಗೆಯನ್ನು ನೀಡಿದವರು ವಿಶ್ವಕರ್ಮ ಸಮುದಾಯ. ಜಾತಿ-ಧರ್ಮದ ತಾರತಮ್ಯವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡವರು. ಶಿಲ್ಪಕಲೆಯನ್ನು ನಾವು ಆರಾಧಿಸಬೇಕು. ಅದನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು ಎಂದರು.
ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಸದಸ್ಯರು, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ವಿಶ್ವಕರ್ಮ ಸಮಾಜದ ಗಂಗಾಧರ ಬಡಿಗೇರ, ವೀರೇಶ ಶೆರೆವಾಡ, ಕಾಶಪ್ಪ ವಡ್ಡಟ್ಟಿ, ಮುತ್ತಣ್ಣ ಹೂಲಗೇರಿ, ಶರಣಪ್ಪ ಬಡಿಗೇರ, ಮುತ್ತಣ್ಣ ಪತ್ತಾರ, ಮಾನಪ್ಪ ಕಮ್ಮಾರ, ವಿಠ್ಠಲ ಪತ್ತಾರ, ಪ.ಪಂ ಸಿಬ್ಬಂದಿಯವರಿದ್ದರು.
ಕೆ.ಜಿ.ಎಸ್ ಶಾಲೆಯಲ್ಲಿ: ಪಟ್ಟಣದ ಕೆ.ಜಿ.ಎಸ್ ಶಾಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಸವರಾಜ ಕುರಿ ವಿಶ್ವಕರ್ಮರ ಕುರಿತು ಮಾತನಾಡಿದರು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.
ಬಸವೇಶ್ವರ ಶಾಲೆಯಲ್ಲಿ: ಪುರಾಣಗಳ ಪ್ರಕಾರ ವಿಶ್ವಕರ್ಮನು ಅಪ್ರತಿಮ ವಾಸ್ತುಶಿಲ್ಪಿ. ಅಸಾಧಾರಣ ಅರಮನೆಗಳಿಂದ ಹಿಡಿದು ದೇವರ ಆಯುಧಗಳು, ದೇವತೆಗಳಿಗೆ ಹಾರುವ ರಥಗಳವರೆಗೆ ಎಲ್ಲವನ್ನು ಸೃಷ್ಟಿಸಿದ ವಿನ್ಯಾಸಕರಾಗಿದ್ದಾರೆ ಎಂದು ಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಹೇಳಿದರು. ಸಿಬ್ಬಂದಿಯವರು, ವಿದ್ಯಾರ್ಥಿಗಳಿದ್ದರು.
ಬೂದಿಹಾಳದಲ್ಲಿ: ಸಮೀಪದ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿಪಟ್ಟಿ, ಸಿ.ಕೆ. ಕೇಸರಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.



