ಇತಿಹಾಸ ಅರಿಯಲು ದೃಶ್ಯ ಕಲೆಗಳು ಅವಶ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ದೇಶದ, ನಾಡಿನ ಇತಿಹಾಸ ಅರಿಯಲು ಇಂತಹ ದೃಶ್ಯ ಕಲೆಗಳ ಪ್ರದರ್ಶನ ಅವಶ್ಯ ಎಂದು ಡಾ|| ಅನ್ನದಾನಿ ಹಿರೇಮಠ ಅಭಿಪ್ರಾಯಪಟ್ಟರು.

Advertisement

ಅವರು ಡೋಣಿ ಗ್ರಾಮದಲ್ಲಿ ಗದುಗಿನ ಲಯಕಲಾ ಮನೆ ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರಕಲಾವಿದ ಶಂಕರಗೌಡ ಪಾಟೀಲ ಇವರು ಸಂಗ್ರಹಿಸಿ, ಪ್ರದರ್ಶಿಸಿದ ರಂಗಭೂಮಿ ಕಲಾವಿದರ ಛಾಯಾಚಿತ್ರಗಳ ಪ್ರದರ್ಶನ ವೀಕ್ಷಿಸಿ ಮಾತನಾಡಿದರು.

ಇತಿಹಾಸದ ಘಟನೆಗಳನ್ನು ರಂಗಕಲಾವಿದರು ತಮ್ಮ ಅಭಿನಯದ ಮೂಲಕ ಪ್ರದರ್ಶಿಸಿದಾಗ ಜನರಲ್ಲಿ ಆ ಘಟನೆಗಳ ಮೂಲಕ ಇತಿಹಾಸವನ್ನು ತಿಳಿಯಲು ನೆರವಾಗುತ್ತದೆ. ಚಿತ್ರಕಲೆಗಳ ಮೂಲಕ ಇತಿಹಾಸದ ಘಟನೆಗಳನ್ನು ಚಿತ್ರಿಸಿದಾಗ ಜನರಲ್ಲಿ ಅರಿವು ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ನೆರವೇರಿಸಿದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಪ್ರದರ್ಶನ ವೀಕ್ಷಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರದರ್ಶನವನ್ನು ಡೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹುಲಿಗೆಮ್ಮ ಅಳವಂಡಿ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ನಡೆದಾಗ ಇಂದಿನ ಮಕ್ಕಳಿಗೆ ನಮ್ಮ ದೇಶದ ಮತ್ತು ನಾಡಿನ ಇತಿಹಾಸ ತಿಳಿಯಲು ಅನುಕೂಲವಾಗುತ್ತದೆ ಎಂದು ನುಡಿದರು.


Spread the love

LEAVE A REPLY

Please enter your comment!
Please enter your name here