ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ವಿಠ್ಠಲ ಮಂದಿರದ ಜೀರ್ಣೋದ್ಧಾರದ ಅಂಗವಾಗಿ ಮಾ. 14ರಂದು ಮುಂಜಾನೆ 8 ಗಂಟೆಗೆ ರುದ್ರ ಸ್ವಾಹಾಕಾರ ಹೋಮ ಹಾಗೂ ಪೂತಿ ಸ್ಥಾಪನೆ ಕಾರ್ಯಕ್ರಮ ಜರುಗಲಿದೆ.
Advertisement
ಮಧ್ಯಾಹ್ನ 12 ಗಂಟೆಗೆ ಪ್ರರ್ಣಾಹುತಿ, ನಂತರ ಮಹಾಮಂಗಳಾರತಿ, ನಂತರ ಮಹಾಪ್ರಸಾದ ನಡೆಯಲಿದೆ. ಮಾ. 16ರಂದು ತುಕಾರಾಮ್ ಬೀಜ, ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ, ಮಾ. 20ರಂದು ಏಕನಾಥ ಶಷ್ಠಿ, ಮಧ್ಯಾಹ್ನ 1.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ ಜರುಗುವದು. ಶ್ರೀ ವಿಠ್ಠಲ ಮಂದಿರದ ಸಂತ ಮಂಡಳಿ ಹಾಗೂ ಸದ್ಭಕ್ತರು ಏಳು ದಿನಗಳವರೆಗೆ ಜರುಗುವ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.


