HomeGadag Newsಯುವಾ ಬ್ರಿಗೇಡ್ ವತಿಯಿಂದ ವಿವೇಕ ಮಾಲಾಧಾರಣೆ

ಯುವಾ ಬ್ರಿಗೇಡ್ ವತಿಯಿಂದ ವಿವೇಕ ಮಾಲಾಧಾರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯುವಾ ಬ್ರಿಗೇಡ್ ಗದಗ ಸಂಘಟನೆ ವತಿಯಿಂದ ಗದುಗಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ದಿವ್ಯತ್ರಯರ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ ಸ್ವಾಮಿ ಜಗನ್ನಾಥಾನಂದಜೀಯವರ ಸಾನ್ನಿಧ್ಯದಲ್ಲಿ ಯುವಾ ಬ್ರಿಗೇಡ್‌ನ ಕಾರ್ಯಕರ್ತರು ವಿವೇಕ ಮಾಲಾ ಧಾರಣೆ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ  ಜಗನ್ನಾಥಾನಂದಜೀಯವರು ಮಾತನಾಡಿ, ಪ್ರತಿವರ್ಷದಂತೆ ಡಿಸೆಂಬರ್ ೨೫ರಂದು ಆಚರಿಸುವ ರಾಕ್ ಡೇಯಿಂದ ಜನೆವರಿ ೧೨ರ ವಿವೇಕಾನಂದರ ಜಯಂತಿ ಹಾಗೂ ರಾಷ್ಟಿçÃಯ ಯುವ ದಿನಾಚಣೆಯವರೆಗೆ ೧೮ ದಿನಗಳ ಕಾಲ ವಿವೇಕ ಮಾಲೆ ಅಭಿಯಾನದ ಆಚರಣೆಯನ್ನು ಆಯೋಜಿಸಲಾಗುತ್ತದೆ. ಈ ದಿನ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿ ಬಂಡೆಯ ಮೇಲೆ ಧ್ಯಾನಸ್ಥರಾಗಿ ಕುಳಿತ ದಿನವಾಗಿದೆ. ಈ ದಿನವನ್ನು ಯುವಾ ಬ್ರಿಗೇಡ್ ಸಂಘಟನೆ ವತಿಯಿಂದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದಲ್ಲಿ ರಾಷ್ಟçದಾದ್ಯಂತ `ರಾಕ್ ಡೇ’ ಎಂದು ಆಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸಂಚಾಲಕರಾದ ಮಂಜುನಾಥ ಜಕ್ಕಲಿ, ಕಪಿಲ್ ಜಿ., ಆನಂದ ಕುರವತ್ತಿ, ವಿಜಯಕುಮಾರ್, ಪಾಂಡು ಚವ್ಹಾಣ, ಗುರು ಹೊಸಂಗಡಿ, ಸಂಗಮೇಶ ಹಡಪದ, ಮಂಜು ಹಿಂಡಿ, ವಿನಾಯಕ, ಶಿವರಾಜ ಸೇರಿದಂತೆ ಯುವಾ ಬ್ರಿಗೇಡ್ ಕಾರ್ಯಕರ್ತರು, ಆಶ್ರಮದ ಪೂಜ್ಯರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!