ಹುಬ್ಬಳ್ಳಿ: ಸಂಕ್ರಾಂತಿ ಮುಗಿದರೂ ಚಳಿ ಇನ್ನೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಚಳಿಯಲ್ಲಿ ಮಲಗುತ್ತಿದ್ದ ನಿರಾಶ್ರಿತರಿಗೆ ಹುಬ್ಬಳ್ಳಿಯ ನಿಖಿಲ್ ಹಂಜಗಿ ನೇತೃತ್ವದ ಜೀವಧ್ವನಿ ಸಂಸ್ಥೆ ಸ್ವೆಟರ್ ವಿತರಿಸಿ ಮಾನವೀಯತೆ ಮೆರೆದಿದೆ.
Advertisement
ರಾತ್ರಿವೇಳೆ ಕಷ್ಟಪಟ್ಟು ದುಡಿಯುವ ಹಮಾಲರಿಗೆ ಮತ್ತು ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್ ಸ್ವೆಟರ್ ವಿತರಣೆ ಮಾಡಿದೆ. ನಿರಾಶ್ರಿತರ ಆರೋಗ್ಯ ರಕ್ಷಣೆ ಹಾಗೂ ಸುಧಾರಣೆ ಜೀವ ಧ್ವನಿ ಫೌಂಡೇಶನ್ ನ ಗುರಿಯಾಗಿದೆ. ಹಿಂದುಳಿದ ವರ್ಗಗಳ ಸೇವೆಗೆ ಟೊಂಕಕಟ್ಟಿ ನಿಂತಿರುವ ಫೌಂಡೇಶನ್ ನಿರಾಶ್ರಿತರ ಏಳ್ಗೆಗೆ ಶ್ರಮಿಸುತ್ತಿದೆ ಎಂದು ಸಂಘಟಿಕರು ಹೇಳಿದ್ದಾರೆ.
ನಿಖಿಲ್ ಹಂಜಗಿಗೆ ರಾಘವೇಂದ್ರ ಬಳ್ಳಾರಿ, ವಿಶ್ವನಾಥ್ ಹಾಗೂ ಗುರು ಉಂಕಿ ಸಾಥ್ ನೀಡಿದ್ದಾರೆ.