ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್ ನಾಯಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಲವು ರಾಜ್ಯಗಳಲ್ಲಿ ನಡೆದಿರುವ ವೋಟ್ ಚೋರಿ ಬಗ್ಗೆ ದಾಖಲೆ ಸಮೇತ ದೇಶದ ಜನರ ಮುಂದೆ ಮಾಹಿತಿ ಇಡುತ್ತಿರುವದು ಸತ್ಯವಾಗಿದೆ. ಈ ದುರುದ್ದೇಶ ದೇಶಕ್ಕೆ ಗೊತ್ತಾದ ಮೇಲೆ ವೋಟ್ ಚೋರಿ, ಬೂತ್ ಚೋರಿ, ಆಯೋಗ ಚೋರಿ ಅಂತಹ ನಿರ್ಲಜ್ಜ ಕೆಲಸಕ್ಕೆ ಕೈಹಾಕಿದ್ದು ಅತ್ಯಂತ ಹೇಸಿಗೆ ತರಿಸುವ ಕೃತ್ಯವಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೌಡಬಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಾದ್ಯಂತ ನಡೆಯುತ್ತಿರುವ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಕೊಪ್ಪಳದಲ್ಲೂ ಅಭಿಯಾನ ನಡೆದಿದ್ದು, ಮಹಿಳಾ ಘಟಕವೂ ಸಹ ಸಹಿ ಸಂಗ್ರಹ ಕೆಲಸದಲ್ಲಿ ತೊಡಗಿದೆ. ಎಲ್ಲಾ ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿ ಅಲ್ಲಲ್ಲಿ ಮನೆ ಮನೆಗೆ ತೆರಳಿ ವೋಟ್ ಚೋರಿ ಕುರಿತು ಮಾಹಿತಿ ನೀಡಿ ಸಹಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ರಕ್ಷಣೆಗೆ ರಾಹುಲ್ ಗಾಂಧಿಯಂತಹ ನೇತಾರನ ಅಗತ್ಯವನ್ನು ದೇಶ ಕಂಡುಕೊಂಡಿದೆ. ಈಗ ಬಿಹಾರ ಚುನಾವಣೆಯನ್ನು ಇಂಡಿಯಾ ಘಟಬಂಧನ್ ಗೆಲ್ಲುವ ಎಲ್ಲಾ ಭರವಸೆ ಮೂಡಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಬಹುಮತದೊಂದಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಜ್ಯೋತಿ ಎಂ.ಗೌಡಬಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


