ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ವಕ್ಫ್ ಕಾಯ್ದೆ ಮೂಲಕ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಸಿದ್ದರಾಮಯ್ಯನವರು ಪದೇ-ಪದೆ ಅಹಿಂದ ನಾಯಕ ಎಂದು ಹೇಳುತ್ತಾ, ಅದೇ ಸಮುದಾಯಕ್ಕೆ ಸೇರುವ ವಾಲ್ಮೀಕಿ ಜನಾಂಗದ ಹಣವನ್ನು ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಸಿ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಸಿ.ಸಿ. ಪಾಟೀಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಗಾಂಧಿ ಸರ್ಕಲ್‌ನಲ್ಲಿ ವಕ್ಫ್ ಕಾಯ್ದೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂಗಳ ಆಸ್ತಿಯನ್ನು ಹಿಂದೂಗಳಿಗೆ ಉಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ `ನಮ್ಮ ಭೂಮಿ, ನಮ್ಮ ಹಕ್ಕು’ ಶೀರ್ಷಿಕೆಯಡಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರ ಸೂಚನೆಯಂತೆ ಹೋರಾಟ ನಡೆಸುತ್ತಿದೆ. 2 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯ ಪರವಾಗಿ ಯಾವುದೇ ಚರ್ಚೆಯಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಇಂದು ರಾಜ್ಯ ದಿವಾಳಿಯ ಅಂಚಿನಲ್ಲಿದೆ. ಮಹಿಳೆಯರು 2 ಸಾವಿರ ರೂ.ಗೆ ಆಸೆ ಬಿದ್ದು ಕಾಂಗ್ರೆಸ್‌ಗೆ ಮತ ಹಾಕಿದರು. ಈಗ ಅವರ ಗಂಡನ ಆಸ್ತಿ ವಕ್ಫ್ ಪಾಲಾಗುತ್ತಿದೆ. ನರಗುಂದದಲ್ಲಿ 770 ಎಕರೆ ಆಸ್ತಿ ವಕ್ಫ್ ಸೇರಿದೆ. ಲಕ್ಕುಂಡಿಯ ಹಿಂದೂರುದ್ರಭೂಮಿ, ಅನ್ನದಾನೇಶ್ವರ ಮಠಗಳು ವಕ್ಫ್ ಆಸ್ತಿಯಾಗಿ ಬದಲಾಗಿದೆ ಎಂದು ವಿವರಿಸಿದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರಿಗೆ ನೋಟಿಸ್ ನೀಡದೇ ಆಸ್ತಿಯನ್ನು ವಕ್ಫ್ಗೆ ಸೇರಿಸಲಾಗಿದೆ. ಬಿಜೆಪಿಯಿಂದ ಹೋರಾಟದ ಮುನ್ಸೂಚನೆ ಸಿಗುತ್ತಿದ್ದಂತೆ ನೋಟಿಸ್ ವಾಪಾಸ್ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಆದರೆ, ಸಿಎಂ ಹೇಳಿದಂತೆ ನೋಟಿಸ್ ವಾಪಾಸ್ ಪಡೆಯಲು ಆಗುವುದಿಲ್ಲ. ಬದಲಾಗಿ ಕಾನೂನಿನಲ್ಲಿ ಬದಲಾವಣೆ ಆಗಬೇಕು ಎನ್ನುವ ಕನಿಷ್ಠ ಜ್ಞಾನ ಸಿಎಂ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕಾಂತಿಲಾಲ್ ಬನ್ಸಾಲಿ, ಉಮೇಶಗೌಡ್ರ ಪಾಟೀಲ, ಶ್ರೀಪತಿ ಉಡುಪಿ, ಶಿವಕುಮಾರ ನಿಲಗುಂದ, ಸುರೆಶ್ ಗೂಳಮ್ಮನವರ, ಸಿದ್ದಣ್ಣ ಪಲ್ಲೇದ್, ಅಶೋಕ ಹೆಬ್ಬಣ್ಣನವರ, ಶಾಂತಣ್ಣ ಕಲಕೇರಿ, ಪ್ರೇಮನಾಥ ಬಣ್ಣದ, ನಿರ್ಮಲಾ ಕೊಳ್ಳಿ, ಅಶ್ವಿನಿ ಜಗಾಪೂರ, ವಿಜಯಲಕ್ಷ್ಮೀ ದಿಂಡೂರ, ವಿದ್ಯಾವತಿ ಗಡಗಿ, ಜಯಲಕ್ಷ್ಮೀ ಉಗಲಾಟದ, ವಿಜಯಲಕ್ಷ್ಮೀ ಮಾನ್ವಿ, ಪ್ರಭಾವತಿ ಬೆಳವಟ, ಲಕ್ಷ್ಮೀ ಖಾಕಿ, ಶಿವಪ್ಪ ಅಂಗದ, ಇರ್ಷಾದ್ ಮಾನ್ವಿ, ಸುದೀರ ಕಾಟಗೇರ, ಮಂಜುನಾಥ ಮುಳಗುಂದ, ಸಂತೋಷ್ ಅಕ್ಕಿ, ಸಂಗಮೇಶ್ ದುಂದೂರ, ಶಶಿಧರ ದಿಂಡೂರ, ರಮೇಶ್ ಸಜ್ಜಗಾರ, ಅಶ್ವಿನಿ ಅಂಕಲಕೊಟಿ, ಸ್ವಾತಿ ಅಕ್ಕಿ, ಬಸವರಾಜ ಇಟಗಿ, ಸಿದ್ದೇಶ್ ಹೂಗಾರ, ಚನ್ನಪ್ಪ ನೆಗಳೂರ, ನಾಗರಾಜ ಕುಲಕರ್ಣಿ, ಚಂದ್ರಶೇಖರ ತಡಸದ, ಎಮ್.ಎಚ್. ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಲಿಂಗರಾಜ ಪಾಟೀಲ, ಮಹೇಶ್ ದಾಸರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.