ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಎಲ್ಲ ಜಿಲ್ಲೆಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಚುನಾವಣಾ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿರಸ್ತೆದಾರರು, ERO, AERO ಹಾಗೂ BLO ಸದಸ್ಯರು, ಎಲ್ಲಾ ತಾಲೂಕುಗಳ ಚುನಾವಣಾ ವಿಷಯನಿರ್ವಾಹಕರು ಹಾಗೂ ನಾಲ್ಕು ಮತಕ್ಷೇತ್ರಗಳ ಚುನಾವಣಾ ಸಮಾಲೋಚಕರು ಮುಂತಾದವರಿಗೆ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ (SSR – Special Summary Revision) ಕುರಿತು ಶನಿವಾರ ತರಬೇತಿ ಏರ್ಪಡಿಸಲಾಗಿತ್ತು.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ವಿ. ಅನ್ಬುಕುಮಾರ ಹಾಗೂ ಜಂಟಿ ಚುನಾವಣಾಧಿಕಾರಿ ಯೋಗೇಶ್ವರ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಯಿತು.
ಗದಗ ಜಿಲ್ಲೆಯ ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ಜಿಲ್ಲೆಯಿಂದ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿ.ಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಚುನಾವಣಾ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿರಸ್ತೆದಾರರು, ERO, AERO ಹಾಗೂ BLO ಸದಸ್ಯರು, ಎಲ್ಲಾ ತಾಲೂಕುಗಳ ಚುನಾವಣಾ ವಿಷಯನಿರ್ವಾಹಕರು ಹಾಗೂ ನಾಲ್ಕು ಮತಕ್ಷೇತ್ರಗಳ ಚುನಾವಣಾ ಸಮಾಲೋಚಕರು ಪಾಲ್ಗೊಂಡಿದ್ದರು.



