ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇಂದಿನ ಚುನಾವಣೆಗಳನ್ನು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ.
ಅಲ್ಲದೇ ಮತದಾರರಿಲ್ಲದ, ಕಾನೂನುಬಾಹಿರ ಹಾಗೂ ಸಂವಿಧಾನಬಾಹಿರ ಚುನಾವಣೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ. ಮತ್ತು ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿರುವುದನ್ನು ಕೂಡ ಒಪ್ಪಿದ್ದಾರೆ. ಅವಾಮಿ ಲೀಗ್ ಇಲ್ಲದೆ, ಜನರ ಮತದಾನದ ಹಕ್ಕುಗಳನ್ನು ಕಳೆದುಕೊಂಡಂತೆ ನಡೆಸಲಾದ ಚುನಾವಣೆ ಅಸಂವಿಧಾನಬಾಹಿರವಾಗಿದೆ. ಅಲ್ಲದೇ ಸರ್ಕಾರದ ಅಡಿಯಲ್ಲಿ ನಡೆದ ಬಂಧನಗಳು, ಬೆದರಿಕೆಗಳು ಮತ್ತು ಭಯದ ವಾತಾವರಣ ಕುರಿತಂತೆ ಖಂಡಿಸಿದ್ದಾರೆ.
ಎಲ್ಲಾ ರಾಜಕೀಯ ಕೈದಿಗಳು, ಶಿಕ್ಷಕರು, ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ವೃತ್ತಿಪರರನ್ನು ಬಿಡುಗಡೆ ಮಾಡಬೇಕು ಮತ್ತು ಅವಾಮಿ ಲೀಗ್ ಚಟುವಟಿಕೆಗಳ ಮೇಲೆ ವಿಧಿಸಲಾಗಿರುವ ಅಮಾನತು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.



