ವಿಜಯಸಾಕ್ಷಿ ಸುದ್ದಿ, ಗದಗ : ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಡವಿಸೋಮಾಪೂರ ಸಣ್ಣ ತಾಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಮತಗಟ್ಟೆಯಲ್ಲಿ ಚುನಾವಣಾ ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್. ನೆರವೇರಿಸಿದರು.
ನಮ್ಮ ನಡೆ ಮತಗಟ್ಟೆ ಕಡೆ, ಮತದಾನ ಮಾಡಿದವನೇ ಹೀರೋ, ಮತದಾನ ನಮ್ಮ ಹಕ್ಕು ಇತ್ಯಾದಿ ಘೋಷವಾಕ್ಯಗಳ ಮೂಲಕ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಶಾಲೆಯ ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ, ಪಿ.ಬಿ. ಕಿಲಬನವರ, ಮಾರುತಿ ಪವಾರ, ವೆಂಕಟೇಶ್ ಲಮಾಣಿ, ಹನುಮಂತ ಲಮಾಣಿ, ಲಕ್ಷ್ಮಣ ಲಮಾಣಿ, ಸೋಮನಾಥ ಲಮಾಣಿ, ಮೌನೇಶ್ ಲಮಾಣಿ, ಬಿಸಿಯೂಟ ಸಿಬ್ಬಂದಿಗಳಾದ ಗಂಗವ್ವ ಲಮಾಣಿ, ಸವಿತಾ ಪವಾರ, ದೇವಲೆಪ್ಪ ಲಮಾಣಿ, ರೇವಪ್ಪ ಲಮಾಣಿ, ಉಮೇಶ ಲಮಾಣಿ, ಸೋಮನಾಥ ರಾಠೋಡ, ಸೀತವ್ವ ಲಮಾಣಿ, ಸಾವಿತ್ರಿ ರಾಠೋಡ, ದೇವಕ್ಕ ಲಮಾಣಿ, ಲಕ್ಷ್ಮಿ ಲಮಾಣಿ, ಮೀರವ್ವ ಪವಾರ, ಶಾಂತವ್ವ ರಾಠೋಡ, ಲಕ್ಷ್ಮಿ ಲಮಾಣಿ, ರೇಣುಕಾ ಲಮಾಣಿ, ಗೀತಾ ರಾಠೋಡ ಸೇರಿದಂತೆ ಶಾಲಾ ಮಕ್ಕಳು ಇದ್ದರು.