ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಲೋಕಸಭಾ ಚುನಾವಣೆಯ ಅಂಗವಾಗಿ ಶುಕ್ರವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಮತ ಚಲಾಯಿಸಿದರು.
Advertisement
ಮತದಾನದ ನಂತರ ಮಾತನಾಡಿದ ಶ್ರೀಗಳು, ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಕೂಡಾ ಮತ ಚಲಾವಣೆ ಮಾಡುವುದು ಅವಶ್ಯಕ. ಮತದಾನ ಸಂವಿಧಾನ ನೀಡಿದ ಉನ್ನತ ಹಕ್ಕು ಎಂಬುದನ್ನು ಮರೆಯಬಾರದು. ರಾಜ್ಯದಲ್ಲಿ ಎರಡು ಹಂತದ ಮತದಾನ ನಡೆಯುತ್ತಿದ್ದು, ಮೊದಲ ಹಂತದ ಮತದಾನದಲ್ಲಿ ತಾವು ಮತ ಚಲಾಯಿಸಿದ್ದೇವೆ. ಸುಭದ್ರ ಮತ್ತು ಸದೃಢ ಸರ್ಕಾರದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು.