ವಿಜಯಸಾಕ್ಷಿ ಸುದ್ದಿ, ಗದಗ: ಜುಲೈ 10ರಂದು ಗುರುಪೂರ್ಣಿಮೆಯ ನಿಮಿತ್ತ ಬೆಳಿಗ್ಗೆ 6 ಗಂಟೆಗೆ ಶ್ರೀ ವೀರನಾರಾಯಣ ದೇವಸ್ಥಾನದಿಂದ 500ಕ್ಕೂ ಹೆಚ್ಚು ಭಕ್ತಾಧಿಗಳಿಂದ ಗದಗ ಜಿಲ್ಲೆಯ ಉದ್ಭವಮೂರ್ತಿ ವೆಂಕಟಾಪುರ ವೆಂಕಟೇಶ್ವರ ದೇವಸ್ಥಾನಕ್ಕೆ ಸತತ 3ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಾದಯಾತ್ರೆ ಸಮಿತಿಯ ಪ್ರಮುಖರಾದ ಬಾಬು ಬಾಕಳೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ದೇಶ ಹಾಗೂ ರಾಜ್ಯದ ಜನತೆಗೆ ಆಯುಷ್ಯ, ಆರೋಗ್ಯ ಲಭ್ಯವಾಗಿ, ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂಬ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಧರ್ಮ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ.
ಪಾದಯಾತ್ರೆಗೆ ಬರುವ ಭಕ್ತಾದಿಗಳಿಗೆ ನಾಗಾವಿಯಲ್ಲಿ, ವಿಮಲ್ ರೆಸಾರ್ಟ್ನಲ್ಲಿ ಉಪಹಾರದ ವ್ಯವಸ್ಥೆ ಇರುತ್ತದೆ. ವೆಂಕಟೇಶ್ವರ ದೇವರ ದರ್ಶನ ಆದ ನಂತರ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಾರು 1500 ಭಕ್ತರಿಗೆ ಊಟದ ವ್ಯವಸ್ಥೆ ಹಮ್ಮಿಕೊಂಡಿರುತ್ತಾರೆ. ಸೇವೆ ಮಾಡಿದ ಎಲ್ಲ ಭಕ್ತಾದಿಗಳಿಗೆ ಪಾದಯಾತ್ರಿಕರಿಗೆ ವೆಂಕಟೇಶ್ವರ ದೇವರು ಸುಖ, ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪಾದಯಾತ್ರೆ ಸಮಿತಿ ವತಿಯಿಂದ ಪ್ರಾರ್ಥಿಸಲಾಗುವುದು ಎಂದು ಬಾಬು ಬಾಕಳೆ ತಿಳಿಸಿದ್ದಾರೆ.



