ಗದಗ:- ಮನೆಯ ಗೋಡೆ ಕುಸಿದು ಆಟ ಆಡುತ್ತಿದ್ದ 8 ವರ್ಷದ ಬಾಲಕ ದುರ್ಮರಣ ಹೊಂದಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಕುರುಬಗೇರಿ ಓಣಿಯಲ್ಲಿ ಜರುಗಿದೆ.
Advertisement
ಪ್ರದೀಪ ಗೋನಾಳ (8) ಮೃತ ಬಾಲಕ. ಗೋಡೆ ಪಕ್ಕದಲ್ಲಿ ಅವಿತುಕೊಂಡು ಆಟ ಆಡುವಾಗ ಮೈಮೇಲೆ ಗೋಡೆ ಕುಸಿದು ಬಾಲಕ ಸಾವನ್ನಪ್ಪಿದ್ದಾರೆ. ಶಾಲೆಯಿಂದ ಮನೆಗೆ ಬಂದ ಬಳಿಕ ಗೆಳೆಯರೊಂದಿಗೆ ಆಟವಾಡುವಾಗ ಈ ಅವಘಡ ಸಂಭವಿಸಿದೆ. ಗೋಡೆ ಬಿದ್ದ ಶಬ್ದಕ್ಕೆ ಓಡಿ ಬಂದು ಸ್ಥಳೀಯರು ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.
ಮಗು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನರಗುಂದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.