ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ!

0
Spread the love

ನವದೆಹಲಿ: ದೇಶಾದ್ಯಂತ ವಕ್ಫ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರಂತೆ, ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಹೊಸ ವಕ್ಫ್ ಮಸೂದೆಯನ್ನು ಮಂಡಿಸಿದ್ದು, ಇದೀಗ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ಅಂಗೀಕಾರ ದೊರೆತಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು.

Advertisement

ಸದನವು ವಿರೋಧ ಪಕ್ಷದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15 ಕ್ಕೆ ಮತದಾನ ನಡೆಯಿತು.

ಇದನ್ನು 231 ವಿರುದ್ಧ 288 ಮತಗಳಿಂದ ತಿರಸ್ಕರಿಸಲಾಯಿತು. ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರು ಇರಬಾರದು ಎಂಬ ಪ್ರಸ್ತಾವನೆ ಇತ್ತು. ಲೋಕಸಭೆಯಲ್ಲಿ ಈ ಮಸೂದೆಯ ಬಗ್ಗೆ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಈಗ ಮಸೂದೆಯನ್ನು ಇಂದು ಅಂದರೆ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.


Spread the love

LEAVE A REPLY

Please enter your comment!
Please enter your name here