ಬೆಂಗಳೂರು: ರೈತರ ಆಸ್ತಿ ಯಾರು ಮುಟ್ಟೋಕೆ ಆಗುವುದಿಲ್ಲ ಎಂದು ಸಚಿವ ಜಮೀರ್ ಅಹಮದ್ ರೈತರ ಜಮೀನಿಗೆ ವಕ್ಫ್ ಬೋರ್ಡ್‌ನಿಂದ ನೀಡರುವ ನೊಟೀಸ್ʼನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೈತರ ಒಂದು ಇಂಚು ಆಸ್ತಿ ಪಡೆದಿಲ್ಲ.
ರೈತರ ಆಸ್ತಿ ಆಗಿದ್ರೆ ಅದನ್ನ ವಾಪಸ್ ಕೊಡ್ತೀವಿ. ಸುಮ್ಮನೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ದಾಖಲಾತಿ ಮಾಡ್ತಿದ್ದೇವೆ. ಅದರಲ್ಲಿ ರೈತರ ಜಾಗ ಯಾವುದೂ ಇಲ್ಲ. ಇವರು ಸುಮ್ಮನೆ ಕ್ರಿಯೇಟ್ ಮಾಡಿಕೊಂಡಿದ್ದಾರೆ. ರೈತರ ಆಸ್ತಿ ಯಾರು ಮುಟ್ಟೋಕೆ ಆಗುವುದಿಲ್ಲ ಎಂದು ಹೇಳಿದರು.
ಯತ್ನಾಳ್ ಮೀಟಿಂಗ್‌ಗೆ ಬರಲಿಲ್ಲ. 3 ದಿನ ಆದ ಮೇಲೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡರೆ ಏನು ತಪ್ಪು? ನಾವು ರೈತರ ಆಸ್ತಿ ಒಂದಿಂಚು ಪಡೆದಿಲ್ಲ. ವಕ್ಫ್ ಆಸ್ತಿ ಖಾತಾ ಮಾಡ್ತಿದ್ದೇವೆ. ರೈತರ ಆಸ್ತಿ ನಾವು ಮುಟ್ಟಲ್ಲ. ಬೇರೆಯವರ ಜಾಗ ನಾವು ಹೇಗೆ ಪಡೆಯೋಕೆ ಆಗುತ್ತದೆ? ಯತ್ನಾಳ್ ಸಭೆಗೆ ಬಂದು ವಿರೋಧ ಮಾಡಬೇಕಿತ್ತು. ಯಾಕೆ ವಿರೋಧ ಮಾಡಲಿಲ್ಲ? ಎಂದು ಪ್ರಶ್ನಿಸಿದರು.