ಬೆಳಗಾವಿ: ವಕ್ಫ್ ಬೋರ್ಡ್‌ನವರು ಮುಂದೆ ವಿಧಾನಸೌಧ, ಮಠಗಳು ನಮ್ಮದೇ ಎನ್ನುತ್ತಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದು ಆಗಿದೆ. ಪಹಣಿ ಪತ್ರದಲ್ಲಿ ಬೇರೆಯವರ ಹೆಸರು ಬರದಂತೆ ರೈತರು ನೋಡಿಕೊಳ್ಳಬೇಕು ಮಾಡಬೇಕು.
Advertisement
ಇಡೀ ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಕ್ಫ್ ಬೋರ್ಡ್‌ನವರು ಮುಂದೆ ವಿಧಾನಸೌಧ, ಪಾರ್ಲಿಮೆಂಟ್, ಮಠಗಳು ನಮ್ಮದೇ ಎನ್ನುತ್ತಾರೆ ಎಂದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್,
ಸಚಿವ ಜಮೀರ್ ಅಹ್ಮದ್ ಭೂಕಬಳಿಕೆ ಮಾಡ್ತಿದ್ದಾರೆ. ಸಿಎಂ ಆದೇಶದ ಮೇರೆಗೆ ಈ ರೀತಿ ಮಾಡಲಾಗ್ತಿದೆ ಎಂದು ಸ್ವತಃ ಜಮೀರ್ ಹೇಳಿದ್ದಾರೆ. ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದೂಗಳ ಆಸ್ತಿ ಉಳಿಸಲು ಕೇಂದ್ರ ಕ್ರಮ ವಹಿಸಿದೆ ಎಂದು ನಿರಾಣಿ ಹೇಳಿದರು.