HomeKarnataka Newsರೈತರ ಜಮೀನಿಗೆ ವಕ್ಫ್ ನೊಟೀಸ್ ವಿಚಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳುವುದೇನು!?

ರೈತರ ಜಮೀನಿಗೆ ವಕ್ಫ್ ನೊಟೀಸ್ ವಿಚಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳುವುದೇನು!?

For Dai;y Updates Join Our whatsapp Group

Spread the love

ಬೆಂಗಳೂರು:- ರೈತರ ಜಮೀನಿಗೆ ವಕ್ಫ್ ಬೋರ್ಡ್‌ನಿಂದ ನೊಟೀಸ್ ವಿಚಾರದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ. 1,319 ಎಕರೆ ಮುಸ್ಲಿಂ ಸಮುದಾಯ ಸಂಘಟನೆಗಳ ಹೆಸರಲ್ಲಿದೆ ಎಂದರು.

ಡಿಸಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಆಗಿದೆ. ದಾಖಲಾತಿ ಇರುವ ರೈತರು ತಂದು ಡಿಸಿಗೆ ಕೊಡಬಹುದು. ದಾಖಲಾತಿ ಇದ್ದರೆ ಅವರಿಗೆ ಜಮೀನು ಸಿಕ್ಕೇ ಸಿಗುತ್ತದೆ. ಮಂಜೂರು ಆಗಿರೋ ಜಮೀನು ಯಾರಿಂದಲೂ ವಾಪಸ್ ಪಡೆಯುವುದಿಲ್ಲ ಎಂದರು.

ವಿಜಯಪುರದಲ್ಲಿ ವಕ್ಫ್ ಸಂಸ್ಥೆಗೆ ಸೇರಿದ ಜಮೀನು ಮತ್ತೊಂದು ಕಡೆ ರೈತರ ಜಮೀನು ಇದರ ಬಗ್ಗೆ ಸ್ಪಷ್ಟನೆ ಕೊಡುತ್ತಿದ್ದೇವೆ. ಈಗಾಗಲೇ ಎಂ ಬಿ ಪಾಟೀಲ್ ಹೇಳಿದ್ದಾರೆ. ಆದರೆ ವ್ಯವಸ್ಥಿತವಾಗಿ ವಿವಾದ ಮಾಡೋ ಕೆಲಸ ಆಗುತ್ತಿದೆ. 1973-74ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ ಆಗಿದೆ. 14,201 ಎಕರೆ ನೋಟಿಫಿಕೇಶನ್ ಆಗಿದೆ.

ಇದರಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ. ಕೆಲವು ದರ್ಗಾ, ಮಸೀದಿ ಸೇರಿದ ಜಾಗ ಇದೆ. 1,319 ಎಕರೆ ವಯಕ್ತಿಕ ಅನುಭೋಗದಲ್ಲಿ ಇಲ್ಲ. ಯಾರಿಗೂ ಮಂಜೂರು ಆಗಿಲ್ಲ. ಅವು ಮುಸ್ಲಿಂ ಸಮುದಾಯದ ಸಂಘಟನೆಗಳ ಹೆಸರಿನಲ್ಲಿ ಇವೆ. 11,835 ಎಕರೆ ರೈತರಿಗೆ ಉಳುವವನೇ ಭೂಮಿಯ ಒಡೆಯ ಅಡಿ ಮಂಜೂರು ಆಗಿದೆ ಎಂದು ತಿಳಿಸಿದರು.

ಯಾರಿಗೆ ನೊಟೀಸ್ ಕೊಡಬೇಕು ಎಂದು ವಕ್ಫ್ ಸಚಿವರು ಹೇಳಲಿಲ್ಲ. ರೈತರಿಗೆ ಮಂಜೂರಾಗಿರೋ ಜಮೀನು ವಾಪಸ್ ಪಡೆಯೋದು ಸರ್ಕಾರದ ಮುಂದೆ ಇಲ್ಲ. 121 ನೋಟಿಸ್ ಹೋಗಿದೆ. ಇಂಡಿ ತಾಲೂಕಿನಲ್ಲಿ 41 ಜನರಿಗೆ ನೋಟಿಸ್ ಕೊಡಬೇಕಿತ್ತು. ಆದರೆ ನೋಟಿಸ್ ಕೊಡದೇ ಆಗಿದೆ. ಆದರೆ ತಹಶಿಲ್ದಾರರು ನೋಟಿಸ್ ಕೊಟ್ಟಿಲ್ಲ. ಹೀಗಾಗಿ ಎ ಸಿ ಅವರು ಅದನ್ನು ತಹಶಿಲ್ದಾರರಿಗೆ ವಾಪಸ್ ಕಳಿಸುತ್ತಾರೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!