ಕಲಬುರಗಿ:- ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ರೈತರಿಗೆ ವಕ್ಫ್ ನೋಟಿಸ್ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರೈತರ ಭೂಮಿಗಳಿಗೆ ವಕ್ಫ್ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ನಿನ್ನೆ ಬೀದರ್ ಹಾಗೂ ಕಲಬುರಗಿಯಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಮಾಡಲಾಗಿದೆ.
ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ ಬೋರ್ಡ್ ರೈತರಿಗೆ ನೋಟಿಸ್ ನೀಡಿದೆ. ಇದ್ರಿಂದ ರೈತರು ಬೀದಿಗಿಳಿದು ಹೋರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ರೈತರ ಪರವಾಗಿ ಬಿಜೆಪಿ ಇದೆ ಅಂತ ನಾವು ಕೂಡ ಹೋರಾಟಕ್ಕೆ ಮುಂದಾಗಿದ್ದೇವೆ. ರೈತರಿಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ದೇವೆ. ಪ್ರತಿಭಟನೆಯಲ್ಲಿ ಈ ಎರಡು ಜಿಲ್ಲೆಯಲ್ಲಿ ಸಾಕಷ್ಟು ರೈತರು ಬಂದು ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿದ್ದೇವೆ ಎಂದರು.
ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿಗೆ ಕೇಳ್ತೆನೆ ಏನು ಜನ ಕಲ್ಯಾಣ ಅಂದ್ರೆ!? ಚುನಾವಣೆ ಬಂದಾಗ ಗ್ಯಾರಂಟಿ ಹಣ ಬಿಡುಗಡೆ ಮಾಡೋದು. ಆಮೇಲೆ ಸುಮ್ಮನಿರೋದು. ಇವರು ಗ್ಯಾರಂಟಿ ಗಳನ್ನ ಅವಮಾನ ಮಾಡೋದಕ್ಕೆ ಮುಂದಾಗಿದ್ದಾರೆ. ಜನರಿಗೆ ಸರಿಯಾಗಿ ತಲುಪಿಸಬೇಕಾದ ಯೋಜನೆ ಕೂಡ ಸರಿಯಾಗಿ ತಲುಪಿಸ್ತಿಲ್ಲ.
ಈಗ ಏನು ಕಲ್ಯಾಣ ಮಾಡಿದ್ದಾರೆ ಅಂತಾ ಜನ ಕಲ್ಯಾಣ ಸಮಾವೇಶ ಮಾಡ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಅಂತಾ ಆಯ್ಕೆಯಾಗಿದ್ದಾರೆ. ಆದ್ರೆ ಶಾಸಕರ ಕ್ಷೇತ್ರಗಳಿಗೆ ಒಂದು ರೂಪಾಯಿ ಅನುದಾನ ಬರ್ತಿಲ್ಲ. ಹಾಸನದ ಸಮಾವೇಶ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಅಷ್ಟೇ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಯಾವ ಕಾರಣಕ್ಕೂ ಸಿಎಂ ಕುರ್ಚಿ ಬಿಡೋದಿಲ್ಲ ಅಂತಾ ಹೇಳ್ತಿದ್ದಾರೆ.
ಇತ್ತ ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಅಂತಾ ಕನಸು ಕಂಡು ಆ ಕಾರ್ಯಕ್ರಮವನ್ನ ಹೈಜಾಕ್ ಮಾಡಿದ್ರು. ಹಾಗಾಗಿ ಕಾರ್ಯಕ್ರಮದಲ್ಲಿ ಡಿಕೆಶಿ ಅವರ ಪೋಟೊ ಹಾಕಿದ್ದಾರೆ. ದೆಹಲಿಯಲ್ಲಿ ಏನು ಒಳ ಒಪ್ಪಂದ ಆಗಿದೆ ಎಂದು ಸಿಎಂ ಹಾಗೂ ಡಿಸಿಎಂ ಅವರು ಬಹಿರಂಗ ಪಡಿಸಬೇಕು. ಕಾಂಗ್ರೆಸ್ ನಲ್ಲಿ ಜಿದ್ದಾ ಜಿದ್ದ ಶುರುವಾಗಿದೆ. ನಾಲ್ಕು ಗೊಡೆಯಲ್ಲಿರೋದು ಇವಾಗ ರಸ್ತೆಯಲ್ಲಿ ಬಂದು ಕಿತ್ತಾಡ್ತಿದ್ದಾರೆ ಎಂದು ಟೀಕಿಸಿದರು.
ಇನ್ನೂ ಮುಡಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯವಾಗಿ ಮುಗಿಸ್ತಿದ್ದಾರೆ ಅಂತಾ ಹೇಳಿದ್ದಾರೆ. ಸಿಎಂ ಅವರ ಪತ್ನಿಗೆ ಅಕ್ರಮವಾಗಿ 14 ನಿವೇಶನ ಕೊಟ್ಟಿರೋದು, ತನಿಖಾ ಸಂಸ್ಥೆಯಲ್ಲಿ ನಿಮಗೆ ಬೇಕಾದ ಅಧಿಕಾರಿಗಳನ್ನು ಇಟ್ಟುಕೊಂಡು ನಿಮ್ಮ ಭಾಮೈದ ರಾತ್ರಿ ಹೋಗಿ ಬೇಟಿ ಆಗಬಹುದು. ಅದನ್ನೆ ಇಡಿಯಿಂದ ಅಕ್ರಮ ಬಹಿರಂಗ ಆಗ್ತಿದ್ದ ಹಾಗೆ ಜಾರಿ ನಿರ್ದೇಶನಾಲಯ ಮೇಲೆ ಹರಿಹಾಯ್ದಿದ್ದಾರೆ. ವೈಟ್ನರ್ ಹಚ್ಚಿ ತಿದ್ದುಪಡಿ ಮಾಡಿರೋದು ಇಡಿಗಿಂತ ಮೊದಲು ಬಯಲಾಗಿದೆ. ನ್ಯಾಯಾಧೀಶರು ಯಾವ ಪ್ರಭಾವಕ್ಕೆ ಒಳಗಾಗದೆ ತೀರ್ಪು ನೀಡ್ತಾರೆ ಎಂದರು.
ಬಿಜೆಪಿಯ ರೇಬಲ್ ಟೀಮ್ ನಾಯಕ ಯತ್ನಾಳ ವಿಚಾರವಾಗಿ ಮಾತನಾಡಿ, ನಾಲಿಗೆ ನಮ್ಮ ಸಂಸ್ಕೃತಿಯನ್ನ ತೋರಿಸುತ್ತದೆ. ವಿಜಯೇಂದ್ರ ಯತ್ನಾಳ ಅವರಿಗೆ ಟೀಕೆ ಮಾಡಿದ್ರು ಅಂತಾ ಅಲ್ಲ. ನನ್ನನ್ನ ಹಿಡಿದುಕೊಂಡು ಎಲ್ಲರಿಗೂ ಇದು ಅನ್ವಯ ಆಗುತ್ತೆ. ಒಬ್ಬ ಸಂಘಟನೆಯಲ್ಲಿ ಹಲವು ಹಿರಿಯ ನಾಯಕರು ಸೇರಿ ಲಕ್ಷಾಂತರ ಕಾರ್ಯಕರ್ತರ ಬೆವರು ಇದೆ. ಒಬ್ಬ ಕಾರ್ಯಕರ್ತನಾಗಿ ನನ್ನ ಆಪೇಕ್ಷೆ ಏನಂದ್ರೆ ಕಾರ್ಯಕರ್ತರಿಗೆ ಅವಮಾನ ಆಗದಂತೆ ನಡೆಯಬೇಕು. ನಾವು ಬೇಜವಬ್ದಾರಿ ಸರ್ಕಾರ , ಸಿಎಂ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ.