ವಕ್ಫ್ ಆಸ್ತಿ ವಿವಾದ: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಗನ ಆಸ್ತಿಗೂ ವಕ್ಫ್ ಕಂಟಕ.!

0
Spread the love

ಚಿಕ್ಕೋಡಿ: ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಭೂಮಿ ವಿವಾದ ಜೋರಾಗಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ವಕ್ಫ್​​ ಸಚಿವೆ, ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪುತ್ರನ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದೆ.

Advertisement

ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ದಂಪತಿಯ ಕಿರಿಯ ಪುತ್ರ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ‌ 2 ಎಕರೆ‌ 13 ಗುಂಟೆ ಜಮೀನಿನ‌ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಹೆಸರು ಸೇರ್ಪಡೆಯಾಗಿದೆ. ಚಿಕ್ಕೋಡಿ ‌ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸರ್ವೆ ನಂಬರ್ 337ರಲ್ಲಿ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನು ಇದೆ.

ಈ ಜಮೀನಿನಲ್ಲಿ ಜೊಲ್ಲೆ ಕುಟುಂಬ ತಲ-ತಲಾಂತರಗಳಿಂದ ಉಳಿಮೆ‌ ಮಾಡುತ್ತಾ ಬಂದಿದೆ. ಆದರೆ, 2021ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಕ್ಫ್​ ಬೋರ್ಡ್​ ಸಚಿವರಾಗಿದ್ದ ಸಮಯದಲ್ಲೇ ತಮ್ಮ ಕಿರಿಯ ಪುತ್ರ ಬಸವಪ್ರಭು ಅವರಿಗೆ ಸೇರಿದ ಜಮೀನು ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದಾಗಿದೆ. ವಕ್ಫ್ ಆಸ್ತಿ ಎಂದು ಉಲ್ಲೇಖಿತ ಪಹಣಿ ಪತ್ರ ನೋಡಿ ಬಸವಪ್ರಭು ಜೊಲ್ಲೆ ದಂಗಾಗಿದ್ದಾರೆ.

ಶಶಿಕಲಾ ಜೊಲ್ಲೆ ಅವರು ತಾವು ಸಚಿವೆಯಾಗಿದ್ದ ಸಮಯದಲ್ಲೇ  ತಮ್ಮ ಪುತ್ರನ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದು ಆಗಿದ್ದು ವಿಪಾರ್ಯಾಸವಾಗಿದೆ. ಅಲ್ಲದೇ, ಇವರ ಅವಧಿಯಲ್ಲಿ ಅನೇಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದು ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here