HomeGadag Newsಯುದ್ಧ ಪರಿಸ್ಥಿತಿ ತೀವ್ರ: ವಿದೇಶಗಳಲ್ಲಿ ಸಿಲುಕಿದವರಿಗಾಗಿ ಗದಗ ಜಿಲ್ಲೆಯಲ್ಲಿ ತುರ್ತು ಸಹಾಯವಾಣಿ

ಯುದ್ಧ ಪರಿಸ್ಥಿತಿ ತೀವ್ರ: ವಿದೇಶಗಳಲ್ಲಿ ಸಿಲುಕಿದವರಿಗಾಗಿ ಗದಗ ಜಿಲ್ಲೆಯಲ್ಲಿ ತುರ್ತು ಸಹಾಯವಾಣಿ

For Dai;y Updates Join Our whatsapp Group

Spread the love

ಗದಗ: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆ ದೇಶಗಳಲ್ಲಿ ಕರ್ನಾಟಕದ ಅನೇಕರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಅವರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ.

ಗದಗ ಜಿಲ್ಲೆಯವರಲ್ಲಿ ಯಾರಾದರೂ ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದರೆ, ಅವರ ಸಂಬಂಧಿಕರು ತಕ್ಷಣ ಸಂಬಂಧಿತ ದೇಶಗಳ ಕಂಟ್ರೋಲ್ ರೂಂ ಸಂಖ್ಯೆಗೆ ಸಂಪರ್ಕಿಸಬೇಕು. ಜೊತೆಗೆ ಗದಗ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೂ ಮಾಹಿತಿ ನೀಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.

ಯುದ್ಧ ಪೀಡಿತ ದೇಶಗಳ ಕಂಟ್ರೋಲ್ ರೂಂ ಸಂಖ್ಯೆಗಳು:

ಕತಾರ್ – 00974-55647502

ಬಹ್ರೇನ್ – 00973-39418071

ಜೋರ್ಡನ್ – 00962-770422276

ಓಮನ್ – ಟೋಲ್ ಫ್ರೀ: 80071234, ವಾಟ್ಸ್‌ಅಪ್: 96898282270

ಇರಾಕ್ – +964 771 651 1185 (ಇಂಗ್ಲೀಷ್/ಹಿಂದಿ), +964 770 444 4899 (ಅರೇಬಿಕ್)

ಕುವೈತ್ – 9656501946

ಪಾಲಸ್ತೈನ್ – 970 592916418

ಗದಗ ಜಿಲ್ಲೆಯ ವಿಪತ್ತು ನಿರ್ವಹಣಾ ಸಹಾಯವಾಣಿ:

ಗದಗ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ – 08372-239177

ತಾಲೂಕು ಮಟ್ಟದ ಸಂಪರ್ಕ ಸಂಖ್ಯೆ:

ಗದಗ – 08372-250009

ಗಜೇಂದ್ರಗಡ – 08381-298982

ಲಕ್ಷ್ಮೇಶ್ವರ – 08487-273273

ಮುಂಡರಗಿ – 08371-262237

ನರಗುಂದ – 08377-245243

ರೋಣ – 08381-267237

ಶಿರಹಟ್ಟಿ – 08487-242100

ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರ ಮಾಹಿತಿ ದೊರೆತ ತಕ್ಷಣ ಮೇಲ್ಕಂಡ ಸಂಖ್ಯೆಗಳ ಮೂಲಕ ಅಧಿಕಾರಿಗಳಿಗೆ ತಿಳಿಸುವಂತೆ ಪ್ರಕಟಣೆ ತಿಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!