ಜೈಪುರ:- ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಕುರ್ರೆಂಡಾ ಗ್ರಾಮದಲ್ಲಿ ಮೊಬೈಲ್ ಗೇಮ್ ಆಡಬೇಡ ಎಂದು ತಂದೆ ಬೈದಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
Advertisement
ರಾಜವೀರ್ ಬಘೇಲ್ ಮೃತ ಬಾಲಕ. ಬಾಲಕ ಫ್ರೀ ಫೈರ್ ಎಂಬ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ, ಇದರಿಂದಾಗಿ ತಂದೆ ಕೋಪಗೊಂಡು ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ಗದರಿದ್ದರು.
ಅಷ್ಟೇ ಅಲ್ಲದೆ ತಂದೆ ರಾಜವೀರ್ ಬಘೇಲ್ ಆಟ ಆಡುತ್ತಿದ್ದಾಗ ಅವನ ಫೋನ್ ಅನ್ನು ಕಸಿದುಕೊಂಡು ವಶಪಡಿಸಿಕೊಂಡಿದ್ದರು. ಕೋಪಗೊಂಡ ಹುಡುಗ ನೇರವಾಗಿ ತನ್ನ ಕೋಣೆಗೆ ಹೋಗಿ ನೇಣಿಗೆ ಶರಣಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ದುರಾದೃಷ್ಟವಶಾತ್ ಅಷ್ಟರಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.


