ಹುಬ್ಬಳ್ಳಿ: ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸಲು ಇದೇ ಸಂದರ್ಭ ಬೇಕಿತ್ತಾ? ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗಾಂಧಿ ಭಾರತದ ಕಾರ್ಯಕ್ರಮದ ಮುಗಿದ ಮೇಲೆ ಮಾಡಬಹುದಿತ್ತು. ದೇಶದಲ್ಲಿ ಎಷ್ಟು ಕಡೆ ಆಸ್ತಿಗಳ ಆಟ್ಯಾಚಮೆಂಟ್ ಮಾಡಿದ್ದು ಇದೆ.
ಇಡಿ ಬಿಜೆಪಿ ಸಂಸ್ಥೆಯ ರೀತಿಯಲ್ಲಿ ವರ್ತಿಸುತ್ತಿದೆ. ಸಮಾವೇಶದ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಗಾಂಧಿ ಕಾರ್ಯಕ್ರಮಕ್ಕೆ ಮುಜುಗರ ತರುವ ಉದ್ದೇಶವಿದೆ ಎಂದರು. ಇನ್ನೂ, ಸಿಬಿಐ ತನಿಖೆ ಕೋರ್ಟ್‌ನಲ್ಲಿ ವಿಚಾರಣೆ ಇರುವಾಗ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ED ಈ ರೀತಿ ಮಾಡಿದ್ದರೆ ತಪ್ಪು ಎಂದ ಎಚ್ ಕೆ ಪಾಟೀಲ್, ಸಣ್ಣ ರಾಜಕಾರಣ, ತುಷ್ಟೀಕರಣ ರಾಜಕಾರಣ ಸರಿಯಲ್ಲ ಎಂದರು.
ಇಡಿ ಜಪ್ತಿಯಲ್ಲಿ ಸಿದ್ದರಾಮಯ್ಯನವರ ಪತ್ನಿಯ ಆಸ್ತಿ ಇರುವ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಅವರ ಪತ್ನಿ 14 ಸೈಟ್ ಮರಳಿ ಕೊಟ್ಟಿದ್ದಾರೆ. ಇನ್ನು ಅಟ್ಯಾಚ್ ಪ್ರಶ್ನೆಯೇ ಬರುವುದಿಲ್ಲ ಎಂದರು.