ಬೆಂಗಳೂರು:- ಬೇಸಿಗೆ ಆರಂಭವಾಗಿರೋದ್ರಿಂದ ಕುಡಿಯುವ ನೀರು ವ್ಯರ್ಥ ಮಾಡದಂತೆ ಹೀಗಾಗಲೇ ಸಿಲಿಕಾನ್ ಸಿಟಿ ಮಂದಿಗೆ ಜಲಮಂಡಳಿ ಸೂಚನೆ ಕೊಟ್ಟಿದೆ. ಅಲ್ಲದೇ ವ್ಯರ್ಥವಾಗಿ ಕುಡಿಯುವ ನೀರು ಬಳಸಿದರೆ 5 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಇತ್ತೀಚೆಗೆ BWSSB ಆದೇಶ ಹೊರಡಿಸಿದೆ.
ಆದರೆ ಜಲಮಂಡಳಿ ಆದೇಶಕ್ಕೆ ಸಿಲಿಕಾನ್ ಸಿಟಿ ಮಂದಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಆದೇಶ ಕ್ಯಾರೇ ಎನ್ನದ ಸಿಲಿಕಾನ್ ಸಿಟಿ ಮಂದಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಕುಡಿಯುವ ನೀರನ್ನು ಅನ್ಯಬಳಕೆ ಮಾಡಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಬರೆ ಎಳೆದಿದೆ.
ಕುಡಿಯುವ ನೀರನ್ನ ಅನ್ಯ ಕೆಲಸಗಳಿಗೆ ಬಳಸಬಾರದು. ಹಾಗೆ ಮಾಡಿದರೆ ದಂಡ ಹಾಕುತ್ತೇವೆ ಎಂದು ಇತ್ತೀಚೆಗೆ BWSSB ಆದೇಶ ಮಾಡಿತ್ತು. ಆದೇಶವನ್ನೂ ಲೆಕ್ಕಿಸದೇ ಕುಡಿಯುವ ನೀರನ್ನ ಅನ್ಯ ಕಾರ್ಯಗಳಿಗೆ ಬಳಿಸಿದವರಿಗೆ ದಂಡ ಹಾಕಲಾಗಿದೆ.
ಬೆಂಗಳೂರಿನ 417 ಜನರಿಗೆ ನೋಟಿಸ್ ನೀಡಿ ಜಲಮಂಡಳಿ ದಂಡ ಹಾಕಿದೆ. 417 ಜನರಿಗೆ 20.85 ಲಕ್ಷ ದಂಡ ಹಾಕಲಾಗಿದೆ. ಬೆಂಗಳೂರು ಪೂರ್ವ ಭಾಗದ ಜನರು ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.