ಶಿವಮೊಗ್ಗ:- ಜೇನುತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುವ ಜಾಲಗಳು ಹೆಚ್ಚಾಗಿದ್ದು, ನಗರದಲ್ಲಿ ಜನರಿಗೆ ಅಸಲಿ ಜೇನುತುಪ್ಪವೆಂದು ನಂಬಿಸಿ ನಕಲಿ ಜೇನುತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಣ್ಣ ಬಯಲು ಆಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತು, ಆಹಾರ ಪದಾರ್ಥ, ನಾವು ಕುಡಿಯುವ ಪಾನಿಯಾಗಳು ಕಲಬೆರಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಅದರಂತೆ ಜೇನುತುಪ್ಪದಲ್ಲೂ ಕಲಬೆರಕೆ ಇದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಛತ್ತಿಸ್ಗಡ್, ಬಿಹಾರ ಮೂಲದ ವ್ಯಕ್ತಿಗಳು ಶುದ್ದ ಜೇನುತುಪ್ಪ ಎಂದು ಕಲಬೆರಕೆ ಜೇನುತುಪ್ಪ ಮಾರುತ್ತಿರುವುದು ಕಂಡು ಬಂದಿದ್ದು, ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಜೇನುತುಪ್ಪ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಕೆಜಿಗೆ 400 ರಿಂದ 800 ರೂ ವರೆಗೆ. ನಕಲಿ ಜೇನುತುಪ್ಪ ಮಾರಾಟ ಮಾಡಿ ಯಾಮಾರಿಸುತ್ತಿದ್ದಾರೆ. ಹಾಗಾಗಿ ಇದರಿಂದ ಸಾವರ್ಜನಿಕರು ಎಚ್ಚರದಿಂದ ಇರಬೇಕು ಹಾಗೂ ರಸ್ತೆ ಬದಿಯಲ್ಲಿ ಜೇನುತುಪ್ಪ ಖರೀದಿ ಮಾಡುವ ಮುನ್ನ ಜನರು ನೂರು ಸಲ ಯೋಚಿಸಬೇಕಿದೆ ಎಂದು ಸ್ಥಳೀಯರಾ ಗೌತಮ್ ಎಂಬುವವರು ಹೇಳಿದ್ದಾರೆ.
ಇನ್ನೂ ಈ ಕಲಬೆರಕೆ ಜೇನುತುಪ್ಪ ಸೇವಿಸುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಸಹ ಕಾಣಿಸಿಕೊಳ್ಳಬಹುದಾಗಿದೆ.