ಟ್ರಾಫಿಕ್ ಫೈನ್ ಕಟ್ಟೋ ಮುನ್ನ ಈ ಸ್ಟೋರಿ ನೋಡಿ!

0
Spread the love

ಬೆಂಗಳೂರು:- ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ ಎಸಗಲಾಗಿದ್ದು, ಟ್ರಾಫಿಕ್‌ ಫೈನ್‌ ಕಟ್ಟೋ ಮುನ್ನ ಎಚ್ಚರವಾಗಿರಿ. ಸಂಚಾರ ಪೊಲೀಸರು 50% ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ನೀಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು ವಾಹನ ಸವಾರರ ಮೊಬೈಲ್ ನಂಬರ್‌ಗಳಿಗೆ ಕೆಲ ಲಿಂಕ್‌ಗಳು, ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಾಹನಗಳ ದಂಡವನ್ನು ಚೆಕ್‌ ಮಾಡಿಕೊಳ್ಳಿ. ಹಾಗೆಯೇ ಇಲ್ಲೇ ದಂಡ ಕಟ್ಟಬಹುದು ಎಂಬ ಮಸೇಜ್‌ಗಳನ್ನು ಕಳುಹಿಸುತ್ತಿದ್ದಾರೆ.

Advertisement

ಇದೇ ರೀತಿ ಸೈಬರ್‌ ಕಳ್ಳರು ಯಾವುದೋ ಲಿಂಕ್‌ ಕಳುಹಿಸಿ ನಿಮ್ಮ ಹಣಕ್ಕೆ ಕನ್ನ ಹಾಕಲು ಮುಂದಾಗಿದ್ದು, ಟೆಕ್ಕಿಯೊಬ್ಬರು 2.65 ಲಕ್ಷ ರೂ. ಕಳೆದುಕೊಂಡಿದ್ದಾರೆ.

ವಂಚಕರ ಮೆಸೇಜ್‌ಗಳನ್ನು ನಂಬಿದ ಹಲವರು ಅದನ್ನು ಓಪನ್ ಮಾಡಿದ ತಕ್ಷಣ ಅಕೌಂಟ್ ನಲ್ಲಿದ್ದ ಹಣ ಮಾಯವಾಗುತ್ತದೆ. ಕೊಡಿಗೇಹಳ್ಳಿ ವ್ಯಾಪ್ತಿಯ ಟೆಕ್ಕಿಯೊಬ್ಬರಿಗೆ ಇದೇ ರೀತಿಯ ಎಪಿಕೆ ಫೈಲ್‌ ಕಳುಹಿಸಿದ ಸೈಬರ್ ವಂಚಕರು ಓಪನ್ ಮಾಡಿ ನಿಮ್ ವಾಹನದ ಫೈನ್ ಎಷ್ಟಿದೆ ಚೆಕ್ ಮಾಡಿಕೊಳ್ಳಿ ಅಂತಾ ಮಸೇಜ್ ಮಾಡಿದ್ದರು.

ಆ ಮಸೇಜ್ ನಂಬಿದ ಟೆಕ್ಕಿ ಆ ಲಿಂಕ್ ನ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ 2.65 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮುರಳಿ ದೂರು ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here