ಗದಗ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ `ಮನ್ ಕೀ ಬಾತ್’ 2025ನೇ ಸಾಲಿನ ಕೊನೆಯ 129ನೇ ಸಂಚಿಕೆಯ ಕಾರ್ಯಕ್ರಮವನ್ನು 4ನೇ ವಾರ್ಡ್‌ನ ಬೂತ್ ಸಂಖ್ಯೆ 24, 25, 26, 27 ಹಾಗೂ 28ರಲ್ಲಿ ಮನ್ ಕೀ ಬಾತ್ ಗದಗ ಜಿಲ್ಲಾ ಸಂಚಾಲಕ ರಾಚಯ್ಯ ಹೊಸಮಠ ಇವರ ನೇತೃತ್ವದಲ್ಲಿ ವೀಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರಾದ ಶ್ರೀಪತಿ ಉಡುಪಿ, ದೇವೇಂದ್ರಪ್ಪ ಗೋಟುರ, ಮಂಜುನಾಥ ತಳವಾರ, ಶಂಕರ ಕಾಕಿ, ಮಂಜಣ್ಣ ಮಾದಗುಂಡಿ, ಕೃಷ್ಣ ಚಿಂತಾ, ಲಕ್ಷ್ಮಣ ವಾಲ್ಮೀಕಿ, ಶಿವು ಗೋಟೂರ ಭಾಗವಹಿಸಿದ್ದರು.



