ಚಾಮರಾಜನಗರ:– ನಗರದಲ್ಲಿ ಕಾವೇರಿ ಕುಡಿಯುವ ನೀರಿನ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮತ್ತು ಶಾಸಕರ ನಡುವೆ ಮಾತಿನ ಜಟಾಪಟಿ ನಡೆದ ಪ್ರಸಂಗ ಜರುಗಿದೆ.
ಕಾವೇರಿ ಕುಡಿಯುವ ನೀರಿನ ಸಮಸ್ಯೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಾಸಕರತ್ತ ಬೊಟ್ಟು ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಉತ್ತರಿಸಿದರು. ಈ ವೇಳೆ ಸಚಿವ ವೆಂಕಟೇಶ್ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ನಡುವೆ ಮಾತಿನ ಜಟಾಪಟಿ ನಡೆಯಿತು.
ನಿನ್ನ ಜವಾಬ್ದಾರಿ ಮಾಡಪ್ಪ ಎಂದು ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ವೆಂಕಟೇಶ್ ಹೇಳಿದರು. ಡಿಸಿ ಬಳಿ ಪ್ರಾಕೃತಿಕ ವಿಕೋಪ ಅನುದಾನ ಇದೆ. ಪಟ್ಟಣಪ್ರದೇಶಕ್ಕೆ ಅನುದಾನ ಕೊಡುವ ಜವಾಬ್ದಾರಿ ಡಿಸಿ ಅವರದ್ದು ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ‘ಹೇಳಿದ್ದನ್ನ ಕೇಳ್ರೀ… ಜವಾಬ್ದಾರಿ ಡಿಸಿಯದ್ದೆ ಅಂತ ಒಪ್ಕೊಳ್ಳೋಣ’ ಎಂದು ಸಚಿವರು ಪ್ರತಿಯಾಗಿ ಮಾತನಾಡಿದ್ದಾರೆ. ಇದು ಡಿಸಿ ಕರ್ತವ್ಯ ಎಂದು ಶಾಸಕ ಉತ್ತರಿಸಿದರು.
ಇದು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇದ್ದಮೇಲೆ ಡಿಸಿ ಹೇಗೆ ಜವಾಬ್ದಾರಿ ಎಂದು ಸಚಿವರು ಪ್ರಶ್ನಿಸಿದರು. ಕ್ರಿಯಾ ಯೋಜನೆಗೆ ಸಹಿ ಹಾಕೋದೆ ಡಿಸಿ ಅಂತ ಶಾಸಕ ಪ್ರತಿಯಾಗಿ ಮಾತನಾಡಿದರು. ಪ್ರಾಕೃತಿಕ ವಿಕೋಪ ಅನುದಾನ ಬಳಕೆಗೆ ಬರ ಘೋಷಣೆಯಾಗಬೇಕು. ಅದೇ ಬೇರೆ ಹಣ ಎಂದು ಸಚಿವರು ಸಮಜಾಯಿಸಿ ನೀಡಿದರು.