ವಿಜಯಸಾಕ್ಷಿ ಸುದ್ದಿ, ಗದಗ: ಭೀಷ್ಮ ಕೆರೆಯು ನಗರದ ಸೌಂದರ್ಯ ಹೆಚ್ಚಿಸಿದೆ. ಇಲ್ಲಿಗೆ ಬರುವ ಜನರು ಇನ್ನು ಮುಂದೆ ಬೋಟಿಂಗ್ ಜೊತೆಗೆ ವಾಟರ್ ರೋಲಿಂಗ್ ಬೋಟ್ ಅನುಭವ ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಸೋಮವಾರ ನಗರದ ಭೀಷ್ಮ ಕೆರೆಯಲ್ಲಿ ನೂತನ ವಾಟರ್ ರೋಲಿಂಗ್ ಬೋಟ್ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಜರಿದ್ದರು.



