ವಿಜಯಸಾಕ್ಷಿ ಸುದ್ದಿ, ಗದಗ : ಬೇಸಿಗೆಯಿಂದಾಗಿ ಸರಾಸರಿ ತಾಪಮಾನ ಗಣನೀಯವಾಗಿ ಏರುತ್ತಿದ್ದು ನದಿ, ಕೆರೆ, ಹಳ್ಳ ಕೊಳ್ಳಗಳಲ್ಲಿನ ನೀರು ಬತ್ತಿಹೋಗಿ, ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ಅಭಾವವುಂಟಾಗಿದೆ. ಈ ಕಾರಣದಿಂದಾಗಿ ರೋಟರಿ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಪಕ್ಷಿಗಳಿಗೆ ನೀರು ಮತ್ತು ಧಾನ್ಯದ ಬಟ್ಟಲುಗಳನ್ನು ರೋಟರಿ ಐ ಕೇರ್ ಸೆಂಟರ್‌ನ ಮಹಡಿ ಮೇಲೆ ಇರಿಸಿ, ಪದಾಧಿಕಾರಿಗಳು ಕಾಳಜಿ ವ್ಯಕ್ತಪಡಿಸಿದರು.
ಅಸಿಸ್ಟಂಟ್ ಗವರ್ನರ್ ಶರಣಬಸಪ್ಪ ಗುಡಿಮನಿ ಮಾತನಾಡಿ, ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲಿ ಪಕ್ಷಿಗಳು ಪ್ರಮುಖವಾಗಿವೆ. ಆರೋಗ್ಯಕರ ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದರು.
ಶರಣಬಸಪ್ಪ ಗುಡಿಮನಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಮಹಡಿಯ ಮೇಲೆ ಶುದ್ಧ ಕುಡಿಯುವ ನೀರನ್ನು ಮಣ್ಣಿನ ಬಟ್ಟಲು ಅಥವಾ ಪಾತ್ರೆಗಳಲ್ಲಿ ಹಾಕಿ ಅದರ ಪಕ್ಕ ಸ್ವಲ್ಪ ಕಾಳುಗಳನ್ನು ಇರಿಸಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ರೊ. ಶ್ರೀಧರ್ ಸುಲ್ತಾನಪುರ, ರೊ. ಬಾಲಕೃಷ್ಣ ಪಿ.ಕಾಮತ್, ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಕೆ. ಜಾಲಿ, ವಿಶ್ವನಾಥ ಯಲಮಲಿ, ರೊ. ಡಾ. ಕಮಲಾಕ್ಷಿ ಅಂಗಡಿ, ಎಸ್.ಎಸ್. ಹೊಸಳ್ಳಿಮಠ, ಡಾ. ಪ್ರದೀಪ್ ಉಗಲಾಟ, ಕಾರ್ಯದರ್ಶಿ ವೀಣಾ ತಿರ್ಲಾಪುರ ಉಪಸ್ಥಿತರಿದ್ದರು.