ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಟ್ರು. ಈ ವೇಳೆ ಮಹದಾಯಿ ಹಾಗೂ ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ರು. ಮಹದಾಯಿ ಯೋಜನೆ ತರ್ತೇವೆಂದು ತರಲೇ ಇಲ್ಲ. ಗೋವಾದಲ್ಲಿ ನಿಮ್ಮದೇ ಸರ್ಕಾರವಿದೆ, ಕೇಂದ್ರದಲ್ಲೂ ನಿಮ್ಮದೇ ಸರ್ಕಾರವಿದೆ.. ಪರಿಸರ ಇಲಾಖೆಯ ಕ್ಲಿಯರೆನ್ಸ್ ಕೊಡಿಸಿ ನಾಳೇ ಮಹದಾಯಿ ಯೋಜನೆಯನ್ನ ಕೈಗೆತ್ತಿಕೊಳ್ತೇವೆಂದು ಬಿಜೆಪಿ ಶಾಸಕರನ್ನ ಒತ್ತಾಯಿಸಿದ್ರು.
ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಸಿಗಲಿದೆ. ತಮಿಳುನಾಡಿಗೆ ಅನ್ಯಾಯವಾಗಲ್ಲ. ಕೇಂದ್ರದಿಂದ ಅವಕಾಶ ಕೊಡಿಸಿ ಅದನ್ನೂ ನಾವು ಕೈಗೆತ್ತಿಕೊಳ್ತೇವೆಂದು ಹೇಳಿದ್ರು. ಜೊತೆಗೆ ಪ್ರಧಾನಿಯವರ ಅನುಮತಿ ಕೊಡಿಸಿ ಸರ್ವ ಪಕ್ಷ ನಿಯೋಗವನ್ನ ಒಯ್ಯೋಣ ಅಂತ ಸ್ಪಷ್ಟಪಡಿಸಿದ್ರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದು ಸಿಎಂ ಸದನಕ್ಕೆ ಉತ್ತರ ಕೊಟ್ರು.



