ರಾಮನಗರ: ನಾನು ಕಟ್ಟಿದ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರುವ ಪರಿಸ್ಥಿತಿ ಬಂತು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಇಲ್ಲಿ ವರ್ಕ್ ಆಗಬಹುದು. ಹಾಗಂತ ಹತಾಶೆ ಇಲ್ಲ, ಸಮಬಲದ ಹೋರಾಟ ಅಷ್ಟೇ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯ ಸ್ಥಿತಿಯನ್ನ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು.
ನಾನು ಕಟ್ಟಿದ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರುವ ಪರಿಸ್ಥಿತಿ ಬಂತು ಎಂದು ಹೇಳಿದರು. ನಾನು ಹಿಂದೆ ಗೆದ್ದಿದ್ದು ಬಿಟ್ರೆ ಇಲ್ಲಿ ಕಾಂಗ್ರೆಸ್ಗೆ ಅಸ್ತಿತ್ವ ಇರಲಿಲ್ಲ. ಈಗ ಕಡಿಮೆ ಸಮಯದಲ್ಲಿ ನಾನು ಸಂಘಟನೆ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ಒಂಥರಾ ಐಪಿಎಲ್ ಮ್ಯಾಚ್ ರೀತಿ ಆಗಿದೆ. ಒಂದೊಂದು ಸೀಸನ್ನಲ್ಲಿ ಒಂದೊಂದು ಟೀಮ್ನಲ್ಲಿ ಆಟ ಆಡುವಂತಾಗಿದೆ ಎಂದು ಹೇಳಿದರು.
ದೇವೇಗೌಡರು ಒಂದು ದೈತ್ಯ ಶಕ್ತಿ. ದೇವೇಗೌಡರಿಗೆ, ಕುಮಾರಸ್ವಾಮಿಗೆ ಬೈದರೆ ಸಹಿಸದ ಸಮುದಾಯ ಇದೆ. ಜನ ದೇವೇಗೌಡರು, ಕುಮಾರಸ್ವಾಮಿ ಅವರನ್ನ ಮಾತ್ರ ಸಮುದಾಯದ ನಾಯಕ ಅಂತ ಗುರುತಿಸುತ್ತಾರೆ. ನಮ್ಮನ್ನ ಸಮುದಾಯದ ಲೀಡರ್ ಅಂತ ಯಾವಾಗ ಸ್ವೀಕಾರ ಮಾಡುತ್ತಾರೋ ಗೊತ್ತಿಲ್ಲ ಎಂದರು.