ನಾವು ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ: ಆಟೋ ಚಾಲಕನ ಮೇಲೆ ಹಿಂದಿ ಮಹಿಳೆಯ ದರ್ಪ!

0
Spread the love

ಬೆಂಗಳೂರು: ಬೇರೆ, ಬೇರೆ ರಾಜ್ಯದವರು ಬೆಂಗಳೂರಿಗೆ ಬಂದು ಕೆಲಸ ಮಾಡ್ತಾರೆ. ಆದ್ರೆ, ಅವರಿಗೆಲ್ಲಾ ಕನ್ನಡ ಮಾತಾಡು ಅಂದ್ರೆ ಸಾಕು ನನಗೆ ಕನ್ನಡ್ ಗೊತ್ತಿಲ್ಲ. ನನಗೆ ಕನ್ನಡ ಬರೋದಿಲ್ಲ ಅಂತೇಲ್ಲಾ ಹೇಳಿ ಧಿಮಾಕು ತೋರಿಸುತ್ತಾರೆ. ಅದಲ್ಲದೆ ಹಿಂದಿ ಮಾತನಾಡುವ ಮಹಿಳೆಯೊಬ್ಬಳು ಆಟೋ ಬಾಡಿಗೆ ವಿಚಾರಕ್ಕೆ ಬೆಂಗಳೂರಿನ ಆಟೋ ಚಾಲಕನ ಜೊತೆಗೆ ಜಗಳಕ್ಕೆ ಇಳಿದ ಘಟನೆ ನಡೆದಿದೆ. ಸದ್ಯ  ಆಟೋ ಚಾಲಕನೊಂದಿಗೆ ಜಗಳಕ್ಕಿಳಿದ ಘಟನೆಯ ವಿಡಿಯೋ ವೈರಲ್ ಆಗಿದೆ.

Advertisement

@VigilntHindutva ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಹಿಂದಿ ಮಾತನಾಡುವ ಮಹಿಳೆಯೊಬ್ಬರು ಆಟೋ ಚಾಲಕನ ಜೊತೆಗೆ ಆಟೋ ಬಾಡಿಗೆ ವಿಚಾರವಾಗಿ ಜಗಳ ಆಡುತ್ತಿರುವುದನ್ನು ಕಾಣಬಹುದು. ಆಟೋ ಹತ್ತುವ ಸಮಯದಲ್ಲಿ 296 ರೂ ತೋರಿಸುತ್ತಿತ್ತು, ಈಗ 390 ರೂ ಆಟೋ ಬಾಡಿಗೆ ಕೇಳ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ವೇಳೆಯಲ್ಲಿ ಆಟೋ ಅಪ್ಲಿಕೇಶನ್ ನಲ್ಲಿ ಎಷ್ಟು ತೋರಿಸುತ್ತಿದೆ ನೋಡಿ ಎಂದು ಆಟೋ ಚಾಲಕನು ತೋರಿಸಿದ್ದು, ಆದರೆ ಮಾತಿಗೆ ಮಾತು ಬೆಳೆದು ಜಗಳವು ಅತಿರೇಕಕ್ಕೆ ತಲುಪಿದೆ.

ಆಟೋ ಚಾಲಕನು ಏನೇ ಹೇಳಿದ್ರೂ ಕೂಡ ಕ್ಯಾರೇ ಎನ್ನದೇ ಹಿಂದಿ ಮಹಿಳೆಯೂ ಮಾತನಾಡಿದ್ದಾಳೆ. ವೇಳೆಯಲ್ಲಿ ಕೋಪಗೊಂಡ ಆಟೋ ಚಾಲಕನು ಕನ್ನಡದಲ್ಲಿ ಮಾತನಾಡು ಎಂದಿದ್ದಾನೆ. ಹೀಗೆನ್ನುತ್ತಿದ್ದಂತೆ ಸಿಟ್ಟಿನಿಂದ ಮಹಿಳೆಯೂ ನಾವು ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ, ನಿನಗೇನಾದರೂ ಗೊತ್ತಿದೆಯಾ ಎಂದು ಪ್ರಶ್ನಿಸಿರುವುದನ್ನು ಕಾಣಬಹುದು.


Spread the love

LEAVE A REPLY

Please enter your comment!
Please enter your name here