ಬೆಂಗಳೂರು: ಮತದಾರಿಗೆ ಅಭಿನಂದನೆ ಸಲ್ಲಿಸೋಕೆ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಸನ ಸಮಾವೇಶಕ್ಕೆ ಜನ ಕಲ್ಯಾಣ ಸಮಾವೇಶ ಎಂಬ ಹೆಸರಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದು ಅಹಿಂದ ಸಮಾವೇಶ ಅಲ್ಲ. ಅಹಿಂದ ಸಮಾವೇಶ ಎಂದು ನಿಮಗೆ ಹೇಳಿದ್ದು ಯಾರು? ಎಂದು ಪತ್ರಕರ್ತರಿಗೆ ಪ್ರಶ್ನೆ ಮಾಡಿದ್ದಾರೆ.
Advertisement
  
ಇನ್ನೂ ಪಕ್ಷದ ಅಡಿಯಲ್ಲಿಯೇ, ಪಕ್ಷದ ನಾಯಕರು, ಮುಖಂಡರ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದೆ. ನಮ್ಮ ಕಾರ್ಯಕ್ರಮಗಳು ಮತ್ತು ಮತದಾರಿಗೆ ಅಭಿನಂದನೆ ಸಲ್ಲಿಸೋಕೆ ಸಮಾವೇಶ ಮಾಡುತ್ತಿದ್ದೇವೆ. ಹಾಸನ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಇಂತಹ ಸಮಾವೇಶ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಿದ್ದಾರೆ. ಸಂಘಟನೆ, ಪಕ್ಷ, ಸರ್ಕಾರ ಇವನ್ನೆಲ್ಲ ಜೊತೆಯಾಗಿ ಅವರು ಮುನ್ನಡೆಸುತ್ತಾರೆ ಎಂದು ಹೇಳಿದ್ದಾರೆ..


