ಈ ವಿಚಾರದಲ್ಲಿ ನಾವು ಭಾರತಕ್ಕಿಂತ ಹಿಂದುಳಿದಿದ್ದೇವೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

0
Spread the love

ವಾಷಿಂಗ್ಟನ್:- ಭಾರತಕ್ಕಿಂತಲೂ ನಾವು ಹಿಂದಿದ್ದೇವೆ ಎಂದು ಹೇಳುವ ಮೂಲಕ ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದಾಗಿದ್ದಾರೆ.

Advertisement

ಎಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಧಿಕಾರಕ್ಕೆ ಬಂದ ಬಳಿಕ, ದಿನಕ್ಕೊಂದು ನಿರ್ಣಯದ ಮೂಲಕ ಸಂಚಲನ ಮೂಡಿಸುತ್ತಿದ್ದು, ಇದೀಗ ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ಇನ್ನು ಮುಂದೆ ಮತ ಚಲಾವಣೆ ಮಾಡುವವರು ಪೌರತ್ವದ ಸಾಕ್ಷ್ಯವನ್ನು ತೋರಿಸುವುದನ್ನು ಕಡ್ಡಾಯ ಮಾಡಿದ್ದಾರೆ.

ಸ್ವಯಂ ಆಡಳಿತಕ್ಕೆ ನಾವು ಅನೇಕರಿಗೆ ದಾರಿದೀಪವಾಗಿದ್ದರೂ ಚುನಾವಣೆಯಲ್ಲಿ ಅತ್ಯಗತ್ಯವಾಗಿ ಇರಬೇಕಿದ್ದ ಪ್ರಾಥಮಿಕ ನಿಯಮಗಳನ್ನು ಜಾರಿ ಮಾಡಲು ನಾವು ವಿಫಲವಾಗಿದ್ದೇವೆ. ಭಾರತ ಬ್ರೆಜಿಲ್‌ನಂತಹ ದೇಶಗಳೂ ಮತಚೀಟಿಗೆ ಬಯೋಮೆಟ್ರಿಕ್ ಡೇಟಾಬೇಸ್ ಲಿಂಕ್‌ ಮಾಡುತ್ತಿವೆ ಎಂದಿದ್ದಾರೆ.

ಸ್ವಯಂ ಆಡಳಿತಕ್ಕೆ ನಾವು ಅನೇಕರಿಗೆ ದಾರಿದೀಪವಾಗಿದ್ದರೂ ಚುನಾವಣೆಯಲ್ಲಿ ಅತ್ಯಗತ್ಯವಾಗಿ ಇರಬೇಕಿದ್ದ ಪ್ರಾಥಮಿಕ ನಿಯಮಗಳನ್ನು ಜಾರಿ ಮಾಡಲು ನಾವು ವಿಫಲವಾಗಿದ್ದೇವೆ. ಚುನಾವಣಾ ವಿಚಾರದಲ್ಲಿ ಅಮೆರಿಕ ಹಿಂದೆ ಉಳಿದಿದೆ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here