ಬೆಳಗಾವಿ: ನಾವು ಬೆಂಕಿ ಇದ್ದಂತೆ, ನಮ್ಮನ್ನ ಕೆಣಕ್ಕಿದ್ರೆ ನೀವು ಸುಟ್ಟುಹೊಗತ್ತಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ಈಗ ಅಧಿವೇಶನದ ಶತಮಾನೋತ್ಸವದ ಭಾಗವಾಗಿ ಸಮಾವೇಶ ನಡೆಯುತ್ತಿದ್ದು, ಇದರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ ಅವರು,
ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್, ಆದ್ರೆ ಸಂವಿಧಾನ ಸುಟ್ಟವರು, ಅಂಬೇಡ್ಕರ್ ಪೋಟೋ ಸುಟ್ಟವರು ಬಿಜೆಪಿಯವರು. ನಮ್ಮನ್ನ ಕೆಣಕಲು ಹೋಗಬೇಡಿ, ನಾವು ಬೆಂಕಿ ಇದ್ದಂತೆ, ನಮ್ಮನ್ನ ಕೆಣಕ್ಕಿದ್ರೆ ನೀವು ಸುಟ್ಟುಹೊಗತ್ತಿರಿ ಎಂದು ಎಚ್ಚರಿಕೆ ಕೊಟ್ಟ ಖರ್ಗೆ ಅವರು,
ಈ ದೇಶದ ತಿರಂಗಾ ಆರ್‌ಎಸ್‌ಎಸ್ ಕಚೇರಿ ಮೇಲೆ ಇಂದಿಗೂ ಹಾರಿಸಿಲ್ಲ. ಈಗ ಸಂವಿಧಾನ ಅಂತಾರೆ. ಸಂವಿಧಾನ ಸುಟ್ಟೋರು, ಮುಗಿಸೋರು ಬಿಜೆಪಿಯವರಾದ್ರೆ, ಸಂವಿಧಾನವನ್ನ ಎಂದಿಗೂ ಕಾಪಾಡುವವರು ಕಾಂಗ್ರೆಸ್‌ನವರು ಎಂದು ಹೇಳಿದರು.
ಮಹಾತ್ಮ ಗಾಂಧೀಜಿಗೆ ಗುಂಡು ಹಾರಿಸಿ ಕೊಂದದ್ದು ಯಾರು? ಆ ಗೋಡ್ಸೆ ಸಾರ್ವಕರ್ ಶಿಷ್ಯ. ಗಾಂಧಿ ಗುಜರಾತ್‌ನವರೇ ಆದರೂ ಮೋದಿಗೆ ಗೌರವ ಇಲ್ಲ. ಏಕೆಂದರೆ ಮೋದಿ ಪೂಜೆ ಮಾಡೋದು ಗಾಂಧಿಗೆ ಗುಂಡು ಹಾರಿಸಿದ ಗೋಡ್ಸೆಯನ್ನೇ ಎಂದು ಕುಟುಕಿದರು.