ಪುಡಾರಿಗಳಿಗೆಲ್ಲ ನಾವು ಹೆದರಲ್ಲ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಬಿ.ವೈ.ವಿಜಯೇಂದ್ರ!

0
Spread the love

ಬೀದರ್:- ಪುಡಾರಿಗಳಿಗೆಲ್ಲ ನಾವು ಹೆದರಲ್ಲ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಹಾಗೂ ಕಾಂಗ್ರೆಸ್ ಎಮ್‌ಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ದ ಏಕವಚನದಲ್ಲೆ ಹರಿಹಾಯ್ದಿದ್ದಾರೆ.

ಆತ ಅಧಿಕಾರ ಶಾಶ್ವತ ಎನ್ನುವ ದುರಹಂಕಾರದಲ್ಲಿ ಮಾತನಾಡಿದ್ದಾನೆ. ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿದ್ದಂತೆ ಕಾಣಿಸುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸುತ್ತೇನೆ. ನಮ್ಮ ಕಾರ್ಯಕರ್ತರೇನು ಬಳೆ ತೊಟ್ಟುಕೊಂಡು ನಿಂತಿಲ್ಲ. ಅಧಿಕಾರ ಶಾಶ್ವತ ಅಲ್ಲ ಎನ್ನುವುದನ್ನು ನೆನಪು ಮಾಡಿಕೊಡಬೇಕು. ದುರಹಂಕಾರದಲ್ಲಿ‌ ಮಾತನಾಡಿದವನಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡೋಣ ಎಂದರು.

ಅಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರು ಅಧಿಕಾರ ಇಲ್ಲದೇ ಇರುವಾಗಲೇ ಹೆದರಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇಂತಹ ಪುಡಾರಿಗಳಿಗೆಲ್ಲ ನಾವು ಹೆದರಲ್ಲ. ಹೆಸರು ಹೇಳದೆ ಕಾಂಗ್ರೆಸ್ ಎಮ್‌ಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ಕಿಡಿಕಾರಿದರು.

ಇನ್ನೂ ಸೆ‌.7ರಂದು ನೂತನ ಸಂಸದರ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ‘ಅವನು ಏನಾದರೂ ಮಾತಾಡಿದರೆ ನಾಲಿಗೆ ಕತ್ತರಿತ್ತೇನೆ, ಸ್ವಲ್ಪ ಸಮಯ ಕೊಡ್ರಿ. ಅವನಿಗೆ ಗಣೇಶನ ಸೊಂಡಿಲಿನಿಂದ ಬೀಸಾಕುತ್ತೇನೆಂದು ಸಿದ್ದು ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು.


Spread the love

LEAVE A REPLY

Please enter your comment!
Please enter your name here