ಅಕ್ರಮವಾಗಿ ರಾಜ್ಯದಲ್ಲಿ ಇರೋರನ್ನ ಗಡಿಪಾರು ಮಾಡೋ ಕೆಲಸ ಮಾಡ್ತಿದ್ದೇವೆ: ಸಚಿವ ಜಿ. ಪರಮೇಶ್ವರ್‌

0
Spread the love

ಬೆಳಗಾವಿ: ಅಕ್ರಮವಾಗಿ ರಾಜ್ಯದಲ್ಲಿ ಇರೋರನ್ನ ಗಡಿಪಾರು ಮಾಡೋ ಕೆಲಸ ಮಾಡ್ತಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಜನ ಪಾಕಿಸ್ತಾನ, 159 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೇ 115 ಜನ ಬಾಂಗ್ಲಾದೇಶಿಯರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ.

Advertisement

ಅದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ. ಅಕ್ರಮವಾಗಿ ಬರೋದು ಇದೇನೂ ಹೊಸದಲ್ಲ ಲಕ್ಷಾಂತರ ಜನ ಭಾರತಕ್ಕೆ ಬರ್ತಿದ್ದಾರೆ. ಅವರನ್ನ ತಡೆಗಟ್ಟುವ ಕೆಲಸ ಸೈನಿಕರು ಬಾರ್ಡರ್‌ನಲ್ಲಿ ಮಾಡ್ತಿದ್ದಾರೆ. ಆದರೂ ನುಸುಳಿಕೊಂಡು ಹೇಗೆ ಭಾರತಕ್ಕೆ ಬರ್ತಾರೆ ಅನ್ನೋದು ಪ್ರಶ್ನೆಯಾಗಿದೆ. ಇದನ್ನ ತಡೆಗಟ್ಟುವ ಕೆಲಸ ಪ್ರತಿ ವರ್ಷ ನಾವು ಇದರ ಪರಿಶೀಲನೆ ಮಾಡ್ತೀವಿ. ಅಕ್ರಮವಾಗಿ ಇರೋರನ್ನ ಗಡಿಪಾರು ಮಾಡೋ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here