ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಮೂಲ ಸಮಾಧಿ ಜಾಗವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದು ಇದೀಗ ಸಮಾಧಿ ನೆಲ ಸಮ ಮಾಡಿದ್ದರ ಕುರಿತು ವಿಷ್ಣುವರ್ಧನ್ ಅಳಿಯ ಅನಿರುದ್ದ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಅನಿರುದ್ದ್, ತುಂಬಾ ನೋವಾಗಿದೆ. ಪುಣ್ಯ ಭೂಮಿಯ ಜಾಗ ಹಾಗೆ ಇರಲಿ ಅಂತ ಹೇಳಿದ್ದೇನೆ.ಅಭಿಮಾನಿಗಳು ಪ್ರತಿವರ್ಷ ಪೂಜೆ ಸಲ್ಲಿಕೆ ಮಾಡ್ತಾರೆ. ಹುಟ್ಟು ಹಬ್ಬದ ದಿನ, ಪುಣ್ಯಸ್ಮರಣೆ ದಿನ ಕಾರ್ಯಕ್ರಮ ಮಾಡ್ತಾರೆ.ಬಾಲಣ್ಣ ಕುಟುಂಬದವ್ರ ಬಳಿ ಕೈಜೋಡಿಸಿ ಈ ಹಿಂದೆ ಮನವಿ ಮಾಡಿಕೊಂಡಿದ್ದೇ. ಈ ರೀತಿ ಆಗಿದ್ದು,ತುಂಬಾ ನೋವಾಗಿದೆ. ನಮ್ಮ ಹೋರಾಟ ಎಷ್ಟು ಜನಕ್ಕೆ ಗೊತ್ತೆ ಇಲ್ಲ ಎಂದಿದ್ದಾರೆ.
ನಮ್ಮನ್ನ ವಿಲನ್ ಮಾಡಿ, ಅವ್ರು ಹೀರೋ ಆಗ್ತಾರೆ. ತೆರವು ವಿಚಾರ ನಮಗೆ ಗೊತ್ತಿಲ್ಲ. ಅಭಿಮಾನಿಗಳ ವಿರುದ್ದ ನಾವಿಲ್ಲ.ಕೆಲವ್ರು ಮಾತ್ರ ಈ ರೀತಿ ಮಾಡ್ತಿದ್ದಾರೆ.ಕೆಲವ್ರ ವಿರುದ್ದ ಮಾತ್ರ ನಾವಿದ್ದೇವೆ. ಅವ್ರ ಜೊತೆ ನಾವಿಲ್ಲ.ಎಲ್ಲಾ ಮೀಟಿಂಗ್ ಗೆ ನಾನು ಕರೆದಿದ್ದೆ. ಬಂದಿಲ್ಲ. ವ್ಯಾಪಾರಿಕರಣ ಅಂತ ಹೇಳ್ತಿದ್ದಾರೆ. ಅದು ಏನೂ ಅಂತ ಗೊತ್ತಿಲ್ಲ. ನಮ್ಮ ವಿರುದ್ದ ಏನೇನ್ ಹೇಳ್ರಿದ್ದಾರೋ ಅವ್ರು ನಿಜವಾದ ಅಭಿಮಾನಿಗಳು ಅಲ್ಲಾ. ಬೆಂಗಳೂರು ಮತ್ತು ಮೈಸೂರಿನಲ್ಲಿ ಎರಡು ಕಡೆ ಇರಲಿ ಅಂತ ಹೇಳಿದ್ವಿ.
ನಾವ್ಯಾಕೆ ತೆರವುಗೊಳಿಸಬೇಕು ಅನ್ಕೊಳ್ತೀವಿ ಹೇಳಿ. ನಮಗೆ ಅಪ್ಪವ್ರು ಅನ್ನೋದು ಪ್ರೀತಿ ಇದೆ.. ನಿಮಗಿಂತ ಹೆಚ್ಚು ಪ್ರೀತಿ ಇದೆ. ದೊಡ್ಡ ಸ್ಮಾರಕ ಇದೆ. ಐದು ಎಕರೆ ಜಾಗದಲ್ಲಿ ಇದೆ.ವ್ಯಾಪಾರಿಕರಣ ಅಂತ ಆರೋಪ ಮಾಡಿದ್ರು.ಸರ್ಕಾರ ಮಾಡಿದ್ದು, ನಮ್ಮ ಮೇಲೆ ಹಾಕಿದ್ರು. ನಮ್ಮ ಜೊತೆ ಸೇರ್ಕೊಳಿ ಅಂತ ಹೇಳ್ತಿದ್ದೇನೆ. ನಿಜವಾದ ಅಭಿಮಾನಿಗಳು ಮತ್ತು ನಮ್ಮ ನಡುವೆ ಬಿನ್ನಭಿಪ್ರಾಯ ಮೂಡಿಸಲು ಈ ರೀತಿ ಮಾಡ್ತಿದ್ದಾರೆ. ಪರಿಶ್ರಮ ತಿಳಿಯದೆ ಏನೇನೋ ಮಾತಾಡ್ಬೇಡಿ ಎಂದು ಅನಿರುದ್ಧ ಹೇಳಿದ್ದಾರೆ.